ಹೈದರಾಬಾದ್ :
ಓರ್ವ ಪ್ರೇಯಸಿಗಾಗಿ ಇಬ್ಬರು ವಿದ್ಯಾರ್ಥಿಗಳು ಪರಸ್ಪರ ಕಿತ್ತಾಡಿಕೊಂಡು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿರುವ ಘಟನೆ ತೆಲಂಗಾಣ ರಾಜ್ಯದ ಜಗಿತ್ಯಾಲ ಜಿಲ್ಲೆಯಲ್ಲಿ ನಡೆದಿದೆ.
ಒಬ್ಬ ಹುಡುಗಿಯನ್ನೇ ಹತ್ತನೇ ತರಗತಿ ವಿದ್ಯಾಥಿಗಳಾದ ರವಿತೇಜ ಮತ್ತು ಕೆ.ಮಹೇಂದರ್ ಅವರು ಪ್ರೀತಿಸುತ್ತಿದ್ದರು. ಹದಿನಾರರ ಹರೆಯದ ವಿದ್ಯಾರ್ಥಿಗಳು ಆ ಹುಡುಗಿಯನ್ನು ಗಾಢವಾಗಿ ಯಾರಿಗೂ ತಿಳಿಯದಂತೆ ಪ್ರೀತಿಸುತ್ತಿದ್ದರು. ಕುಡಿದ ಅಮಲಿನಲ್ಲಿ ಒಬ್ಬರಿಗೊಬ್ಬರು ಪರಸ್ಪರ ಕಿತ್ತಾಡಿಕೊಂಡು ನಂತರ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾರೆ.
ಕೆ.ಮಹೇಂದರ್ ಎಂಬ ಒಬ್ಬ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವ ರವಿ ತೇಜ ಎಂಬ ವಿದ್ಯಾರ್ಥಿ ಗಂಭೀರ ಸುಟ್ಟಗಾಯಗೊಂಡಿದಿಗೆ ಆಸ್ಪತ್ರೆಗೆ ದಾಖಲಾಗಿ ಅಲ್ಲಿ ಕೊನೆಯುಸಿರೆಳೆದಿದ್ದಾನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ