ರಾಂಚಿ:
ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಿದ್ದ ಯೋಧನೊಬ್ಬ ತನ್ನ ಇಬ್ಬರು ಮೇಲಧಿಕಾರಿಗಳನ್ನು ಗುಂಡು ಹಾರಿಸಿ ಕೊಂದಿರುವ ಘಟನೆ ಬೊಕಾರೊ ಪಟ್ಟಣದಲ್ಲಿ ನಡೆದಿದೆ.
ಬೂಕಾರೋದಲ್ಲಿನ 226ನೇ ಸಿಆರ್‌ಪಿಎಫ್ ಬೆಟಾಲಿಯನ್‍ನ ಚಾರ್ಲಿ ಚಾಂಪ್‍ನಲ್ಲಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ಯೋಧನ ಆಕ್ರೋಶಕ್ಕೆ ಸಹಾಯಕ ಕಮಾಂಡೆಂಟ್ ಶ್ರೇಣಿಯ ಅಧಿಕಾರಿ ಮತ್ತು ಸಬ್‍ಇನ್ಸ್‍ಪೆಕ್ಟರ್ ಹತರಾಗಿದ್ದಾರೆ. ಅಲ್ಲದೇ ಗುಂಡಿನ ದಾಳಿಯಲ್ಲಿ ಇನ್ನಿಬ್ಬರು ತೀವ್ರ ಗಾಯಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಸಿಆರ್‍ಪಿಎಫ್ ಮತ್ತು ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ರಾಂಚಿಯಲ್ಲಿ ಸೋಮವಾರ ನಡೆದ ಇಂಥದ್ದೇ ಮತ್ತೊಂದು ಪ್ರಕರಣದಲ್ಲಿ ಛತ್ತೀಸಗಡ ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೆಬಲ್ ಒಬ್ಬರು ಕಂಪನಿ ಕಮಾಂಡರ್ ಮೇಲೆ ಗುಂಡು ಹಾರಿಸಿ, ತಾವೂ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಯೋಧರಿಂದ ಮೇಲಾಧಿಕಾರಿಗಳ ಮೇಲೆ ನಡೆದ ಎರಡನೇ ಹತ್ಯೆ ಪ್ರಕರಣ ಇದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ