ನವದೆಹಲಿ:
ಗಡಿ ಭದ್ರತಾ ಪಡೆಯ ಕೇಂದ್ರ ಕಚೇರಿಯ ಸಿಬ್ಬಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಚೇರಿಯ ಎರಡು ಮಹಡಿಗಳನ್ನು ಸೀಲ್ ಡೌನ್ ಮಾಡಲಾಗಿದೆ.
ದೆಹಲಿಯ ಜಾಮಾ ಮಸೀದಿ ಮತ್ತು ಚಾಂದಿನಿ ಮಹಲ್ ಪ್ರದೇಶದಲ್ಲಿ ನಿಯೋಜಿಸಲಾಗಿದ್ದ 126ನೇ ಬೆಟಾಲಿಯನ್ ಗೆ ಸೇರಿದೆ 25 ಬಿಎಸ್ ಎಫ್ ಯೋಧರಿಗೆ ಇಂದು ಪಾಸಿಟಿವ್ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಂಟು ಮಹಡಿಯ ಬಿಎಸ್’ಎಫ್ ಕೇಂದ್ರ ಕಚೇರಿ ದೆಹಲಿಯ ಲೋಧಿ ರಸ್ತೆಯ ಸಿಜಿಒ ಕಾಂಪ್ಲೆಕ್ಸ್ ನಲ್ಲಿದೆ. ಇಲ್ಲಿಯೇ ಸಿಆರ್ ಪಿಎಫ್ ನ ಕೇಂದ್ರ ಕಚೇರಿ ಸಹ ಇದ್ದು ಇಲ್ಲಿನ ಇಬ್ಬರು ಸಿಬ್ಬಂದಿಯಲ್ಲಿ ಕೊರೋನಾ ಕಾಣಿಸಿಕೊಂಡಿತ್ತು.
“ಫೋರ್ಸ್ ಹೆಡ್ ಕ್ವಾರ್ಟರ್ಸ್ ನಲ್ಲಿ ಕೆಲಸ ಮಾಡುತ್ತಿರುವ ಬಿಎಸ್ಎಫ್ನ ಹೆಡ್ ಕಾನ್ಸ್ಟೇಬಲ್ ಮೇ 3 ರಂದು ತಡರಾತ್ರಿ ಕೋವಿಡ್ -19 ಪಾಸಿಟೀವ್ ಕಂಡುಬಂದಿದೆ. ಅವರು ಕೊನೆಯ ಬಾರಿಗೆ ಮೇ 1 ರಂದು ಕಚೇರಿಗೆ ಹಾಜರಾಗಿದ್ದರು, ಅವರು 2 ನೇ ಮಹಡಿಯಲ್ಲಿರುವ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಮುನ್ನೆಚ್ಚರಿಕೆಯಾಗಿ ಪ್ರಧಾನ ಕಚೇರಿಯ ಮೊದಲ ಮತ್ತು ಎರಡನೇ ಮಹಡಿಗಳಲ್ಲಿನ ಕಚೇರಿಗಳನ್ನು ಮುಚ್ಚಲಾಗಿದೆ” ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ.
ಕಚೇರಿಯ ಸ್ವಚ್ಛತೆ ಕಾರ್ಯ ನಡೆಯುತ್ತಿದೆ. ಕೊರೋನಾ ಸೋಂಕು ಹೇಗೆ ತಗುಲಿತು ಎಂದು ಪತ್ತೆಕಾರ್ಯದಲ್ಲಿ ತೊಡಗಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ