ಬಜೆಟ್-2019 : ರೈತರಿಗೆ ‘ಶೂನ್ಯ ಬಂಡವಾಳ ಕೃಷಿ’ಗೆ ಒತ್ತು!!

ದೆಹಲಿ :

      ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಇಂದು ಲೋಕಸಭೆಯಲ್ಲಿ ತಮ್ಮ ಚೊಚ್ಚಲ ಬಜೆಟ್ ಮಂಡನೆ ಮಾಡಿದ್ದು, ಮೋದಿ ಸರ್ಕಾರದ ಎರಡನೇ ಅವಧಿಯ ಮೊದಲ ಬಜೆಟ್ ನಲ್ಲಿ ಮಣ್ಣಿನ ಮಗನಿಗೆ ನಿರೀಕ್ಷೆಯಂತೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 

      ಭರವಸೆ ನೀಡಿದಂತೆ ರೈತ ವರ್ಗದ ಆದಾಯವನ್ನು ದ್ವಿಗುಣಗೊಳಿಸಲು ಸರ್ಕಾರ ಬದ್ಧವಾಗಿದ್ದು, ಪ್ರಮುಖ ಬೆಳೆ ಹಾಗೂ ಮಧ್ಯಂತರ ಬೆಳೆಗಳಿಂದ ಗಳಿಸುವ ಆದಾಯದ ಸಮತೋಲನ ಕಾಯ್ದುಕೊಳ್ಳಲು ‘ಶೂನ್ಯ ಬಂಡವಾಳ ಕೃಷಿಗೆ’ ಹೆಚ್ಚು ಒತ್ತು ನೀಡಲಾಗುತ್ತಿದೆ. ರಾಸಾಯನಿಕಗಳ ಬಳಕೆಯನ್ನು ಕಡಿಮೆಗೊಳಿಸಿ ಸಗಣಿಯಿಂದ ತಯಾರಿಸಿದ ಗೊಬ್ಬರ, ಗೋಮೂತ್ರ ಬಳಕೆಗೆ ಆದ್ಯತೆ ನೀಡಲು ಯೋಜಿಸಲಾಗಿದೆ. ಪ್ರಸ್ತುತ ಆಂಧ್ರಪ್ರದೇಶ ರಾಜ್ಯದಲ್ಲಿ ಸದ್ಯ ಜಾರಿಯಲ್ಲಿರುವ ಪದ್ಧತಿಯನ್ನು ಎಲ್ಲೆಡೆ ಜಾರಿಗೊಳಿಸಲಾಗುತ್ತದೆ. ಎಂದು ತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದರು.

10 ಸಾವಿರ ರೈತ ಉತ್ಪಾದಕ ಸಂಸ್ಥೆಗಳ ಸ್ಥಾಪನೆ ಮಾಡಲಾಗುತ್ತಿದೆ. ಪ್ರಧಾನಮಂತ್ರಿ ಕಿಸಾನ್ ಯೋಜನೆಯನ್ನು ಪ್ರಸಕ್ತ ಸಾಲಿಗೂ ಮುಂದುವರೆಸಲಾಗುತ್ತಿದ್ದು, ವಾರ್ಷಿಕ 6 ಸಾವಿರ ರುಗಳನ್ನು ಸರ್ಕಾರ ನೀಡುತ್ತಿದ್ದು, 14.5 ಕೋಟಿ ರೈತರಿಗೆ ಇದರ ಪ್ರಯೋಜನೆ ಸಿಗಲಿದೆ. 

  1.       ಪ್ರಸಕ್ತ ವರ್ಷಕ್ಕೂ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯನ್ನು ಮುಂದುವರೆಸಲಾಗುತ್ತಿದ್ದು, ವಾರ್ಷಿಕ ರೂ. 6 ಸಾವಿರ ಸಹಾಯಧನ ಸರ್ಕಾರ ನೀಡುತ್ತಿದ್ದು, ಸುಮಾರು 14.5 ಕೋಟಿ ರೈತರಿಗೆ ಪ್ರಯೋಜನೆ ಸಿಗಲಿದೆ.
  2.       ಸಾಂಪ್ರದಾಯಿಕ ಕೃಷಿಯನ್ನು ಹೆಚ್ಚು ಉತ್ಪಾದನಾಯುಕ್ತ ಮಾಡಲು ಕ್ಲಸ್ಟರ್ ಮಾದರಿ ಪದ್ಧತಿ ಮೂಲಕ ಸಾಂಪ್ರದಾಯಿಕ ಆಗ್ರೋ ಕೈಗಾರಿಕೆಗಳನ್ನು ಉತ್ತೇಜಿಸಲು ಯೋಜನೆ ರೂಪಿಸಲಾಗಿದೆ.
  3.       12.5 ಕೋಟಿ ಸಣ್ಣ ಹಾಗೂ ಮಧ್ಯಮ ರೈತರಿಗೆ (2 ಹೆಕ್ಟೇರ್) ವಾರ್ಷಿಕ ರೂ. 6000 (ಮೂರು ಕಂತಿನಲ್ಲಿ). ನೀಡಲಾಗುತ್ತದೆ . ಮೊದಲ ಕಂತಿನಲ್ಲಿ 3.11 ಕೋಟಿ ರೈತರಿಗೆ ಹಾಗೂ ಎರಡನೇ ಕಂತಿನಲ್ಲಿ 2.66 ಕೋಟಿ ರೈತರಿಗೆ ಸೌಲಭ್ಯ ಸಿಗಲಿದೆ.
  4.       ಪ್ರಧಾನ ಮಂತ್ರಿ ಕಿಸಾನ್ ಪಿಂಚಣಿ ಯೋಜನೆ ಮೂಲಕ ಮಾಸಿಕ ರೂ. 3000 ಪಿಂಚಣಿ ನೀಡಲಾಗುವುದು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ (PMKSS) ಅಡಿಯಲ್ಲಿ 60 ವರ್ಷ ಮೇಲ್ಪಟ್ಟ ರೈತರಿಗೆ ಪ್ರತಿ ತಿಂಗಳಿಗೆ ರೂ. 3000 ಕೇಂದ್ರ ಸರ್ಕಾರದಿಂದ ನೀಡಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
  

Recent Articles

spot_img

Related Stories

Share via
Copy link