ಕೇಂದ್ರ ಬಜೆಟ್ : ರೈಲ್ವೆಗೆ 1.6ಲಕ್ಷ ಕೋಟಿ ಮೀಸಲು!

ದೆಹಲಿ:

      ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಕೊನೆಯ ಮತ್ತು ಮಧ್ಯಂತರ ಬಜೆಟ್ ಅನ್ನು ಅರುಣ್ ಜೇಟ್ಲಿ ಅವರ ಬದಲಿಗೆ ವಿತ್ತ ಸಚಿವ ಪಿಯೂಷ್ ಗೋಯಲ್ ಇಂದು ಮಂಡಿಸಿದ್ದಾರೆ. 

      ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಧ್ಯಂತರ ಬಜೆಟ್ ಮಂಡಿಸಿರುವ ಕೇಂದ್ರ ಸರ್ಕಾರ ರೈಲ್ವೆಗೆ 1.6 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿರಿಸಿದೆ.

ಕೇಂದ್ರ ಬಜೆಟ್ 2019 : ಅಪ್‍ಡೇಟ್ಸ್!!!

      ದೇಶದ ಅತ್ಯುನ್ನತ ವೇಗದ ‘ವಂದೇ ಭಾರತ್​ ಎಕ್ಸ್​ಪ್ರೆಸ್​’ ರೈಲುಗಳು ಶೀಘ್ರದಲ್ಲಿಯೇ ಸಂಚಾರ ಆರಂಭಿಸಲಿವೆ. ಈ ರೈಲುಗಳನ್ನು ಭಾರತೀಯ ಇಂಜಿನಿಯರುಗಳೇ ಸಂಪೂರ್ಣವಾಗಿ ನಿರ್ಮಿಸಿರುವುದು ವಿಶೇಷವಾಗಿದೆ. ಅಲ್ಲದೆ, ಈ ವರ್ಷ ಭಾರತಿಯ ರೈಲ್ವೆಗೆ ಸುರಕ್ಷಿತ ವರ್ಷ ಎಂದಿರುವ ಹಂಗಾಮಿ ಹಣಕಾಸು ಸಚಿವ ಪಿಯುಶ್ ಗೋಯಲ್, ಪ್ರಸ್ತುತ ದೇಶದಲ್ಲಿ ಏಕೈಕ ಮಾನವರಹಿತ ಕ್ರಾಸಿಂಗ್ ಇಲ್ಲ ಎಂದಿದ್ದಾರೆ.

      ಅಷ್ಟೇ ಅಲ್ಲದೆ, ಅಂತರಾಷ್ಟ್ರೀಯ ಸೌರ ಒಕ್ಕೂಟ(ISA)ದಲ್ಲಿ ಭಾರತವೂ ಸದಸ್ಯ ರಾಷ್ಟ್ರವಾಗಿರುವುದು ದೊಡ್ಡ ಸಾಧನೆಯಾಗಿದ್ದು, ದೇಶಕ್ಕೆ ಹೆಮ್ಮೆ ತರುವ ವಿಚಾರ ಎಂದು ಗೋಯಲ್ ಹೇಳಿದ್ದಾರೆ.

      2014ರಿಂದ ಈಚೆಗೆ ಮೋದಿ ಸರ್ಕಾರ ರೈಲ್ವೆ ಇಲಾಖೆಗೆ ಹೆಚ್ಚಿನ ಅನುದಾನ ನೀಡಿದ್ದು ಇದು ಶೇ 148ರಷ್ಟು ಹೆಚ್ಚಳವಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ