ಶಿಷ್ಯ ಅನಂತ್ ಅಂತಿಮ ದರ್ಶನ ಪಡೆದ ಗುರು ಅಡ್ವಾಣಿ

ಬೆಂಗಳೂರು :

       ಶ್ವಾಸಕೋಶದ ಕ್ಯಾನ್ಸರ್ ಎಂಬ ಮಹಾಮಾರಿಗೆ ತುತ್ತಾಗಿ, ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಹೆಚ್.ಎನ್. ಅನಂತ್ ಕುಮಾರ್ ಅವರ ಅಂತ್ಯ ಸಂಸ್ಕಾರ ಇಂದು ಚಾಮರಾಜಪೇಟೆಯ ಚಿತಾಗಾರದಲ್ಲಿ ನಡೆಯಲಿದೆ.

      ಕೇಂದ್ರ ಸಚಿವರಾದ ಹರ್ಷವರ್ಧನ್​, ಧರ್ಮೇಂದ್ರ ಪ್ರಧಾನ್​, ಪೀಯುಷ್​ ಗೋಯೆಲ್​, ರಾಮದಾಸ್​ ಅಠಾವಳೆ, ವಿಧಾನ ಪರಿಷತ್​ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ, ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​, ರಾಜ್ಯ ಸಚಿವ ಸಾ.ರಾ.ಮಹೇಶ್, ಬೆಂಗಳೂರು ಮಹಾನಗರ ಪಾಲಿಕೆ ಮೇಯರ್​ ಗಂಗಾಂಬಿಕೆ,  ರಾಜ್ಯ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್​ ಅಂತಿಮ ನಮನ ಸಲ್ಲಿಸಿದರು. ಮೂರು ಸೇನೆಗಳ ಪ್ರಮುಖರು ಸರ್ಕಾರಿ ಗೌರವ ಸಲ್ಲಿಸಿದರು.

     ಅನಂತ್ ರ ಗುರು ಎಂದೇ ಬಿಂಬಿತರಾಗಿರುವ ಬಿಜೆಪಿ ಮುಖಂಡರಾದ ಎಲ್.ಕೆ. ಅಡ್ವಾಣಿ ಸಹಾ ಶಿಷ್ಯನ ಅಂತಿಮ ದರ್ಶನ ಪಡೆದು ಅನಂತ್ ಪತ್ನಿ ತೇಜಸ್ವಿನಿಯವರಿಗೆ ಸಾಂತ್ವನ ಹೇಳಿದರು.

      ಅನಂತಕುಮಾರ್​ ಅವರ ಮೃತದೇಹಕ್ಕೆ ಹೊದೆಸಿದ್ದ ರಾಷ್ಟ್ರಧ್ವಜವನ್ನು ತೆಗೆದು ಕುಟುಂಬ ವರ್ಗಕ್ಕೆ ಹಸ್ತಾಂತರಿಸಲಾಯಿತು. ಕೆಲವೇ ಕ್ಷಣಗಳಲ್ಲಿ ಅಗ್ನಿಸ್ಪರ್ಶವಾಗಲಿದೆ.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link