ಮುಂಬೈ:
ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಮೊಳಗುತ್ತಿರುವಾಗಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕುಸಿದು ಕುಳಿತ ಘಟನೆ ಮಹಾರಾಷ್ಟ್ರದ ಸೊಲಾಪುರದಲ್ಲಿ ನಡೆದಿದೆ.
ಗುರುವಾರ ಸೊಲಾಪುರದ ಪುಣ್ಯಶ್ಲೋಕ್ ಅಹಲ್ಯಾದೇವಿ ಹೊಳ್ಕರ್ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೂಂದರಲ್ಲಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭಾಗವಹಿಸಿದ್ದರು. ಮುಖ್ಯಅತಿಥಿಯಾಗಿದ್ದ ಗಡ್ಕರಿ ಅವರು ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಮೊಳಗುತ್ತಿದ್ದ ಸಂದರ್ಭದಲ್ಲಿ ಎದ್ದು ನಿಂತು ಗೌರವ ಸೂಚಿಸುತ್ತಿದ್ದರು. ಆದರೆ ರಾಷ್ಟ್ರಗೀತೆಯ ನಡುವಲ್ಲೇ ನಿತಿನ್ ಗಡ್ಕರಿ ಅವರು ನಿಲ್ಲಲಾಗದೆ, ಕುಸಿದು ಕುಳಿತರು. ಇದರಿಂದಾಗಿ ಕೆಲಕಾಲ ಕಾರ್ಯಕ್ರಮದಲ್ಲಿ ಆತಂಕ ಮನೆ ಮಾಡಿತ್ತು. ಅನಾರೋಗ್ಯದ ಕಾರಣ ಹೀಗಾಗಿದೆ. ಭಯ ಪಡುವಂಥದ್ದು ಏನೂ ಇಲ್ಲ ಎಂದು ನಂತರ ಅವರ ಆಪ್ತರು ತಿಳಿಸಿದರು.
ಕೆಲ ವರ್ಷಗಳಿಂದ ನಿತಿನ್ ಗಡ್ಕರಿ ಅವರ ಆರೋಗ್ಯ ಹದಗೆಟ್ಟಿದೆ. ಇತ್ತೀಚೆಗಷ್ಟೆ ಕೆಲವು ಸಮಾರಂಭಗಳಲ್ಲಿ ಇಂಥದ್ದೇ ಘಟನೆ ನಡೆದಿತ್ತು. ಇದೀಗ ಅದು ಪುನರಾವರ್ತನೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ