ಶ್ರೀನಗರ:
ಉಗ್ರರ ದಾಳಿಯಲ್ಲಿ ಹುತಾತ್ಮರಾದ ಎಲ್ಲ ಸೈನಿಕರಿಗೆ ಜಮ್ಮು ಕಾಶ್ಮೀರದ ಬುಗ್ಮಾಮ್ನಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಗೌರವ ನಮನ ಸಲ್ಲಿಸಿದರು.
ಬೆಳಿಗ್ಗೆ ದೆಹಲಿಯಿಂದ ಇಲ್ಲಿಗೆ ಬಂದಿಳಿದ ಸಚಿವ ರಾಜನಾಥ್ ಸಿಂಗ್ ಅವರು, ಯೋಧರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಚರಿಸಿ ನಮನ ಸಲ್ಲಿಸಿದ್ದಾರೆ.
ಇದೇ ವೇಳೆ ವೀರ ಯೋಧರಿಗೆ ಶೃದ್ಧಾಂಜಲಿ ಸಲ್ಲಿಕೆ ಮಾಡಿ, ರಾಜನಾಥ ಸಿಂಗ್ ಮತ್ತು ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಅವರು ಸೈನಿಕರ ಪಾರ್ಥಿವ ಶರೀರಗಳಿಗೆ ಹೆಗಲು ನೀಡಿದರು.
The nation will not forget the supreme sacrifice of our brave @crpfindia jawans. Paid my last respects to the martyrs of Pulwama in Srinagar today. Their sacrifice will not go in vain. pic.twitter.com/uJKUoFmKev
— Rajnath Singh (@rajnathsingh) February 15, 2019
ದೇಶವು ಎಂದಿಗೂ ಸರ್ವೋಚ್ಛ ಯೋಧರ ತ್ಯಾಗವನ್ನು ಮರೆಯುವುದಿಲ್ಲ. ಶ್ರೀನಗರದಲ್ಲಿ ಹುತಾತ್ಮ ಯೋಧರಿಗೆ ಅಂತಿಮ ನಮನ ಸಲ್ಲಿಸಿದೆ. ಅವರ ತ್ಯಾಗವು ವ್ಯರ್ಥವಾಗಲು ಬಿಡುವುದಿಲ್ಲ ಎಂದು ರಾಜನಾಥ ಸಿಂಗ್ ಅವರು ಟ್ವೀಟ್ ಮಾಡಿದ್ದಾರೆ.
ಇಂದು ಸಂಜೆ 5 ಗಂಟೆ ಸುಮಾರಿಗೆ ವೀರ ಮರಣ ಅಪ್ಪಿರುವ ಸೈನಿಕರ ಪಾರ್ಥಿವ ಶರೀರ ನವದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಈ ವೇಳೆ ಪ್ರಧಾನಿ ಮೋದಿಯವರು ಯೋಧರಿಗೆ ಅಂತಿಮ ನಮನ ಸಲ್ಲಿಸಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
