ಮುಂಬೈ:
ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ನಾನು ಕಾಂಗ್ರೆಸ್ ಮೇಲೆ ಹಾಗೂ ರಾಹುಲ್ ಗಾಂಧಿ ಅವರ ಮೇಲಿನ ನಂಬಿಕೆಯಿಂದಾಗಿ ಕಾಂಗ್ರೆಸ್ ಸೇರಿದ್ದೇನೆ, ರಾಹುಲ್ ಗಾಂಧಿ ತಮ್ಮ ಜೊತೆ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಲಿದ್ದಾರೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಬುಧವಾರ ಕಾಂಗ್ರೆಸ್ ಸೇರಿದ ಇವರು ಉತ್ತರ ಮುಂಬೈಯಲ್ಲಿ ಕಣಕ್ಕಿಳಿಯಲ್ಲಿದ್ದಾರೆ. ಈ ವೇಳೆ ಮುಂಬೈ ಘಟಕದ ಮುಖ್ಯಸ್ಥ ಮಿಲಿಂದಾ ಡೇರಾ, ರಣದೀಪ್ ಸಿಂಗ್ ಸುರ್ಜೇವಾಲಾ, ಸಂಜಯ್ ನಿರೂಪಮ್ ಉಪಸ್ಥಿತರಿದ್ದರು.
ಊರ್ಮಿಳಾ ಮಾತೋಂಡ್ಕರ್ ಲೋಕಸಭೆ ಚುನಾವಣೆಗೆ ಕಣಕ್ಕಿಳಿಯಲಿದ್ದು, ಪ್ರತಿಷ್ಠಿತ ಕ್ಷೇತ್ರವಾದ ಮುಂಬಯಿ ಉತ್ತರದಿಂದ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಾರೆ. ಇಲ್ಲಿ ಬಿಜೆಪಿಯಿಂದ ಸಂಸದ ಗೋಪಾಲ್ ಶೆಟ್ಟಿ ಸ್ಪರ್ಧೆಯಲ್ಲಿದ್ದು, ಊರ್ಮಿಳಾ ಇವರ ವಿರುದ್ಧ ಸೆಣಸಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ