ವೀಸಾಕ್ಕೆ ಸಾಮಾಜಿಕ ಜಾಲತಾಣದ ವಿವರ ಅಗತ್ಯ!

ವಾಷಿಂಗ್ಟನ್‌ :

      ಅಮೆರಿಕ ವೀಸಾ ಪಡೆಯಲು ಬಯಸುವವರು ಇನ್ನು ಮುಂದೆ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳ ವಿವರಗಳನ್ನು ಅರ್ಜಿಯಲ್ಲಿ ನಮೂದಿಸಬೇಕು ಎಂಬ ಹೊಸ ನಿಯಮವನ್ನು ಅಮೆರಿಕ ಜಾರಿಗೆ ತಂದಿದೆ.

     ಹೌದು, ಅಮೆರಿಕದಲ್ಲಿ ವಿವಿಧ ಉದ್ದೇಶಗಳಿಗಾಗಿ ವಿದೇಶಿಯರಿಗೆ ನೀಡಲಾಗುವ ವೀಸಾ ಪಡೆಯಲು ಅರ್ಜಿದಾರರು ನಿರ್ದಿಷ್ಟ ಅವಧಿಗೆ ತಮ್ಮ ಸಾಮಾಜಿಕ ಜಾಲ ತಾಣ ಮತ್ತು ದೂರವಾಣಿ ಕರೆಗಳ ಬಗ್ಗೆ ವಿವರ ನೀಡಬೇಕೆಂದು ಹೊಸ ನೀತಿಯಲ್ಲಿ ಉದ್ದೇಶಿಸಲಾಗಿದೆ.

      ‘ಸಾಮಾಜಿಕ ಜಾಲತಾಣಗಳು ಭಯೋತ್ಪಾದನಾ ಕೃತ್ಯಗಳನ್ನು ಹೆಚ್ಚಿಸುವ, ಉಗ್ರ ಚಟುವಟಿಕೆಗಳ ವೇದಿಕೆಯಾಗಿದೆ. ಈ ನಿಯಮದ ಮೂಲಕ ಇಂಥ ಮನಃಸ್ಥಿತಿಯ ವ್ಯಕ್ತಿಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಜೊತೆಗೆ ಇಂಥವರು ನಮ್ಮ ದೇಶದಲ್ಲಿ ಅಡಗಿ ಕೂರುವುದು ತಪ್ಪಲಿದೆ’ ಎಂದಿದೆ.

      ಈ ನಿಯಮವು ಕಡಿಮೆ ಅವಧಿಗೆ ವೀಸಾ ಪಡೆಯುವವರಿಗೂ ಅನ್ವಯವಾಗುತ್ತದೆ. ಖಾತೆ ಇಲ್ಲದಿದ್ದರೆ, ಇಲ್ಲ ಎನ್ನುವುದನ್ನೂ ನಮೂದಿಸಬೇಕು. ತಪ್ಪು ಮಾಹಿತಿ ನೀಡಿದರೆ, ಪರಿಣಾಮ ಎದುರಿಸಬೇಕಾಗಬಹುದು ಎಂದಿದೆ.

      ಅಮೆರಿಕದಲ್ಲಿ ವ್ಯಾಸಂಗ ಮಾಡಲು ಮತ್ತು ಉದ್ಯೋಗ ಅರಸಿ ಬರುವ ವಿದೇಶಿಯರಿಗೆ ಹೊಸ ವೀಸಾ ನೀತಿ ಜಾರಿಗೊಳಿಸಿದ ಬೆನ್ನಲ್ಲೇ ವಾಷಿಂಗ್ಟನ್ ಉಗ್ರರು ಬೇರೆ ಸೋಗಿನಲ್ಲಿ ದೇಶ ಪ್ರವೇಶಿಸಲು ತಡೆಗಟ್ಟುವುದಕ್ಕೆ ಮತ್ತೊಂದು ವೀಸಾ ನೀತಿಯನ್ನು ಅನುಷ್ಟಾನಗೊಳಿಸಲಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

 

Recent Articles

spot_img

Related Stories

Share via
Copy link
Powered by Social Snap