ಉತ್ತರ ಕನ್ನಡ:
ಮಲೆನಾಡು ಭಾಗದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಮಂಗನ ಕಾಯಿಲೆಗೆ ಹಲವಾರು ಮಂದಿ ಬಲಿಯಾಗುತ್ತಿದ್ದಾರೆ. ಸ್ಥಳೀಯ ಜನರನ್ನು ಬಲಿತೆಗೆದುಕೊಳ್ಳುತ್ತಿದ್ದ ಮಂಗನ ಕಾಯಿಲೆ ಪ್ರವಾಸಕ್ಕೆಂದು ಮಲೆನಾಡಿಗೆ ಬಂದಿದ್ದ ವಿದೇಶಿ ಮಹಿಳೆಗೂ ತಗುಲಿದೆ.
ನೇಪಾಳ ಮೂಲದ ಫ್ರಾನ್ಸ್ ದಂಪತಿ ಉತ್ತರ ಕನ್ನಡ ಜಿಲ್ಲೆ ಪ್ರವಾಸಕ್ಕೆಂದು ಬಂದಿದ್ದರು. ಗೋಕರ್ಣ, ಯಾಣ ಪ್ರವಾಸದ ವೇಳೆ ಮಹಿಳೆಗೆ ಸೋಂಕು ತಗುಲಿ ಜ್ವರ ಕಾಣಿಸಿಕೊಂಡಿತ್ತು . ನಂತರ ಆಕೆ ಕುಮುಟಾ ಆಸ್ಪತ್ರೆಗೆ ದಾಖಲಾದರು. ವೈದ್ಯರು ಪರೀಕ್ಷಿಸಿದಾಗ ಮಂಗನ ಕಾಯಿಲೆ ಲಕ್ಷಣಗಳು ಇರುವುದು ಬೆಳಕಿಗೆ ಬಂದಿದೆ.

ಹೀಗಾಗಿ ಮಹಿಳೆಯನ್ನು ಕುಮುಟಾ ಆಸ್ಪತ್ರೆಯಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಜ್ವರ ಉಲ್ಭಣಗೊಂಡಿರುವ ಕಾರಣ ವೈದ್ಯರು ಚಿಕಿತ್ಸೆ ನೀಡುತ್ತಿದ್ಧಾರೆ ಎಂದು ತಿಳಿದು ಬಂದಿದೆ. ಮಹಿಳೆಯ ವಿವರ ನೀಡಲು ಆಸ್ಪತ್ರೆ ಮೂಲಗಳು ನಿರಾಕರಿಸಿವೆ ಎನ್ನಲಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಆಸುಪಾಸಿನ ಒಟ್ಟು 152 ಜನರು ಈ ತನಕ ಶಂಕಿತ ಮಂಗನ ಕಾಯಿಲೆಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದ ಮಂಗನ ಕಾಯಿಲೆ ಕಾಫಿನಾಡು ಚಿಕ್ಕಮಗಳೂರಿಗೂ ಹರಡಿರುವ ಅನುಮಾನ ವ್ಯಕ್ತವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








