ಹಗರಿಬೊಮ್ಮನಹಳ್ಳಿ;
ರಾಜಕಾರಣವೆಂದರೆ ನಾಟಕವಲ್ಲ, ಅದೊಂದು ತಪಸ್ಸು ಎಂದು ಬಳ್ಳಾರಿ ಲೋಕಸಭಾ ಉಪಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅಭಿಪ್ರಾಯಪಟ್ಟರು.
ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕು ಹಂಪಸಾಗರದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾತನಾಡುತ್ತಿದ್ದ ಅವರು, ನಿಮಗೆ ಕನ್ನಡನಾಡಿನ ಮಗ ಬೇಕಾ? ಅಥವಾ ಆಂಧ್ರದ ಸೊಸೆ ಬೇಕಾ ಎಂದು ಪ್ರಶ್ನಿಸಿದರು. ಈ ಚುನಾವಣೆಯಲ್ಲಿ ನನ್ನನ್ನು ನೀವು ಗೆಲ್ಲಿಸಿದರೆ, ನನ್ನ ಕೊನೆಯುಸಿರಿರುವವರೆಗೆ ಬಳ್ಳಾರಿಯಲ್ಲಿಯೇ ವಾಸಿಸುವುದಾಗಿ ತಿಳಿಸಿದರು.
