ನವದೆಹಲಿ:
ಕೊರೊನಾ ವೈರಸ್ ಲಸಿಕೆ ಹಂಚಿಕೆ ಅಭಿಯಾನ ಜನವರಿ 16ರಿಂದ ದೇಶದ್ಯಾಂತ ಪ್ರಾರಂಭವಾಗುತ್ತದೆ ಎಂದು ಕೇಂದ್ರ ಸರ್ಕಾರ ಇಂದು ಮಾಹಿತಿ ನೀಡಿದೆ.
ಈಗಾಗಲೇ ಬಹುತೇಕ ರಾಜ್ಯಗಳಲ್ಲಿ ಪೂರ್ವಭಾವಿ ತಯಾರಿಗಾಗಿ ಡ್ರೈರನ್ ನಡೆಸಲಾಗಿದ್ದು, ಇದೀಗ ಲಸಿಕೆ ನೀಡಿಕೆಗೆ ಅಧಿಕೃತವಾಗಿ ಜನವರಿ 16 ರಂದು ಚಾಲನೆ ಸಿಗಲಿದೆ.
Vaccination drive to kick off on 16th Jan, 2021. Priority will be given to the healthcare workers and the frontline workers, estimated to be around 3 cr, followed by those above 50 years and the under-50 population groups with co-morbidities numbering around 27 cr: Govt of India pic.twitter.com/M4CzcBzMqf
— ANI (@ANI) January 9, 2021
ಮೊದಲ ಹಂತದಲ್ಲಿ 30 ಕೋಟಿ ಜನರಿಗೆ ಕೊರೊನಾ ಲಸಿಕೆ ಹಂಚಿಕೆ ಮಾಡಲಾಗ್ತಿದ್ದು, ಹೆಲ್ತ್ ಕೇರ್ ವರ್ಕರ್ಸ್ ಮತ್ತು ಮುಂಚೂಣಿ ಕಾರ್ಮಿಕರಿಗೆ ನೀಡಲಾಗುತ್ತೆ. ಇದಕ್ಕಾಗಿ ಈಗಾಗಲೇ ಅವರುಗಳಿಂದ ಸಂಪೂರ್ಣ ಮಾಹಿತಿ ಪಡೆಯಲಾಗಿದೆ. ಶೀಘ್ರದಲ್ಲೇ ಅವರುಗಳ ಮೊಬೈಲ್ ಗೆ ಲಸಿಕೆ ನೀಡುವ ಕುರಿತು ಸಂದೇಶ ರವಾನೆಯಾಗಲಿದೆ.
ನಂತ 50 ವರ್ಷ ಮೇಲ್ಪಟ್ಟವರು ಮತ್ತು ರೋಗ ಲಕ್ಷಣಗಳನ್ನ ಹೊಂದಿರುವಂತಹ ವ್ಯಕ್ತಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ