ಪಾಕಿಸ್ತಾನ ಬೆಂಬಲಿತ ಉಗ್ರರಿಂದ ಭಾರತದ ಮೇಲೆ ನಡೆಯುತ್ತಿರುವ ದಾಳಿ ಮುಂದುವರಿಯಲಿದೆ ಎಂದು ಅಮೆರಿಕ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
ಪಾಕಿಸ್ತಾನ ಉಗ್ರರ ಸ್ವರ್ಗ ಎಂದು ಭಾರತ ಈ ಮೊದಲಿನಿಂದಲೂ ಹೇಳುತ್ತಾ ಬರುತ್ತಿದೆ. ಅಮೆರಿಕ ಕೂಡ ಇದನ್ನು ಪುನರುಚ್ಛರಿಸಿದೆ “ಭಯೋತ್ಪಾದನೆ ನಿಗ್ರಹಕ್ಕೆ ಪಾಕಿಸ್ತಾನ ಹೆಚ್ಚು ಪ್ರಯತ್ನ ಮಾಡುತ್ತಿಲ್ಲ. ಕೆಲ ಉಗ್ರ ಸಂಘಟನೆಗಳನ್ನು ನೀತಿ ರಚನೆಗೆ ಬಳಕೆ ಮಾಡಿಕೊಳ್ಳುತ್ತಿದೆ. ಹಾಗಾಗಿ, ಉಗ್ರರು ಪಾಕಿಸ್ತಾನದಲ್ಲಿ ಹಾಯಾಗಿದ್ದಾರೆ. ಅಲ್ಲಿಯೇ ಇದ್ದುಕೊಂಡು ಭಾರತ, ಅಫ್ಗಾನಿಸ್ತಾನದ ಮೇಲೆ ದಾಳಿ ನಡೆಸುವ ಯೋಜನೆ ಹಾಕಿಕೊಳ್ಳುತ್ತಿದ್ದಾರೆ,” ಎಂದಿದ್ದಾರೆ.
ಪಾಕಿಸ್ತಾನ ಉಗ್ರ ಸಂಘಟನೆಗೆ ಬೆಂಬಲ ನೀಡುತ್ತಿರುವುದು ಅಮೆರಿಕಕ್ಕೂ ಸಂಕಟ ತಂದೊಡ್ಡುವ ಕಳವಳ ವ್ಯಕ್ತಪಡಿಸಿದ್ದಾರೆ ಅಲ್ಲಿನ ಗುಪ್ತಚರ ಇಲಾಖೆ ಅಧಿಕಾರಿಗಳು. “ಈ ಉಗ್ರರು ಕೇವಲ ಭಾರತ-ಪಾಕಿಸ್ತಾನ ಮಾತ್ರವಲ್ಲದೆ ಅಮೆರಿಕದ ಪ್ರಜೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ” ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.