ವಾಷಿಂಗ್ಟನ್:
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಅಮೆರಿಕಕ್ಕೆ ತೆರಳಿರುವ ಪಾಕಿಸ್ತಾನ ಪಿಎಂ ಇಮ್ರಾನ್ ಖಾನ್ಗೆ ಸಭೆಯೊಂದರಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಪಾಕ್ ವಿರುದ್ಧ ಘೋಷಣೆ ಕೇಳಿಬಂದಿದೆ.
ಭಾನುವಾರ ಖಾನ್ ಭಾಷಣ ವೇಳೆ ಪಾಕ್ನ ಅಲ್ಪಸಂಖ್ಯಾತ ಸಿಂಧಿ, ಬಲೂಚಿ ಮತ್ತು ಮೊಹಜಿರ್ಸ್ ಜನಾಂಗಗಳಿಗೆ ಸೇರಿದ ಅನಿವಾಸಿ ಪಾಕಿಸ್ತಾನಿಯರು ಬಲೂಚಿಸ್ತಾನದಲ್ಲಿ ಪಾಕಿಸ್ತಾನದ ಭದ್ರತಾ ಪಡೆಗಳು ದೌರ್ಜನ್ಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿವೆ ಎಂದು ಆರೋಪಿಸಿ ಪ್ರಧಾನಿ ಇಮ್ರಾನ್ ಖಾನ್ಗೆ ಧಿಕ್ಕಾರ ಕೂಗಿದ್ದಾರೆ.
#WATCH Baloch activists disrupt Pakistan PM Imran Khan's speech during a community event in Washington DC, USA. pic.twitter.com/S9xdXF1yt8
— ANI (@ANI) July 22, 2019
ಆದರೆ ಯುವಕರು ಸಭೆಯ ಮುಖ್ಯ ವೇದಿಕೆಯಿಂದ ದೂರದಲ್ಲಿ ಇದ್ದುದರಿಂದ ಇಮ್ರಾನ್ ಖಾನ್ ಭಾಷಣಕ್ಕೆ ಯಾವುದೇ ಅಡಚಣೆಯಾಗಲಿಲ್ಲ. ಹೀಗಾಗಿ ಅವರು ತಮ್ಮ ಭಾಷಣ ಮುಂದುವರೆಸಿದರು. ಬಳಿಕ ಯುವಕರನ್ನು ಭದ್ರತಾ ಸಿಬ್ಬಂದಿ ಸಭಾಂಗಣದಿಂದ ಹೊರ ಕಳುಹಿಸಿದರು.
ಇಮ್ರಾನ್ ಖಾನ್ ಇಂದು( ಸೋಮವಾರ )ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
