ಅನುಮಾನಾಸ್ಪದವಾಗಿ ಹಾರಾಡುತ್ತಿದ್ದ ಪಾಕ್ ಡ್ರೋನ್ ಧ್ವಂಸ!!

ಜಮ್ಮುಕಾಶ್ಮೀರ :

     ಜಮ್ಮು ಮತ್ತು ಕಾಶ್ಮೀರದ ಅಂತರರಾಷ್ಟ್ರೀಯ ಗಡಿಯಲ್ಲಿ ಭದ್ರತಾ ಪಡೆ ಶನಿವಾರ (ಜೂನ್ 20) ಪಾಕಿಸ್ತಾನದ ಪತ್ತೇದಾರಿ ಡ್ರೋನ್ ನ್ನು ಹೊಡೆದುರುಳಿಸಿದೆ.

     ಗಡಿಯಲ್ಲಿ ಪಾಕ್ ಸೈನಿಕರ ಪುಂಡಾಟಿಕೆ ಮುಂದುವರೆದಿದ್ದು, ಜಮ್ಮುಕಾಶ್ಮೀರದ ಕಥುವಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ಸಮೀಪ 250 ಮೀ. ಎತ್ತರದಲ್ಲಿ ಹಾರಾಡುತ್ತಿದ್ದ ಡ್ರೋನ್ ನತ್ತ ಬಿಎಸ್ ಎಫ್ ಯೋಧರು  ಎಂಟರಿಂದ ಒಂಬತ್ತು ಸುತ್ತು ಗುಂಡು ಹಾರಿಸಿ ಡ್ರೋನ್ ಹೊಡೆದುರುಳಿಸಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

     ಡ್ರೋನ್‌ ಅನ್ನು ಪರಿಶೀಲಿಸಲಾಗಿದ್ದು, ಅದಕ್ಕೆ ಶಸ್ತ್ರಾಸ್ತ್ರಗಳನ್ನು ಜೋಡಿಸಿ ರವಾನಿಸಿರುವುದು ಖಚಿತವಾಗಿದೆ. ಅದರಲ್ಲಿ ಬಂದೂಕುಗಳು ಪತ್ತೆಯಾಗಿವೆ. ಈ ಕುರಿತು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಡ್ರೋನ್‌ ಕುರಿತು ತನಿಖೆ ನಡೆಯುತ್ತಿದೆ.

 

 

Recent Articles

spot_img

Related Stories

Share via
Copy link
Powered by Social Snap