ಕೋಲ್ಕತಾ:
ನ್ಯಾಷನಲ್ ವೇಟ್ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ಅ ಚಿನ್ನದ ಪದಕ ಗೆಲ್ಲುವ ಮೂಲಕ ತಮ್ಮದೇ ರಾಷ್ಟ್ರೀಯ ದಾಖಲೆ ಮುರಿದಿದ್ದಾರೆ.
25 ವರ್ಷದ ಮಣಿಪುರದ ಮೀರಾಬಾರಿ ಚಾನು ಸ್ನ್ಯಾಚ್ ವಿಭಾಗದಲ್ಲಿ 88 ಕೆ.ಜಿ ಹಾಗೂ ಎರಡನೇ ಪ್ರಯತ್ನದಲ್ಲಿ ಕ್ಲೀನ್ ಹಾಗೂ ಜೆರ್ಕ್ನಲ್ಲಿ 115 ಕೆ.ಜಿ ಬಾರ, ಒಟ್ಟು 203 ಕೆ.ಜಿ ತೂಕ ಎತ್ತುವ ಮೂಲಕ ಸ್ವರ್ಣ ಪದಕ ತನ್ನದಾಗಿಸಿಕೊಂಡರು. ಈ ಮೂಲಕ ಅಗ್ರಸ್ಥಾನ ತಮ್ಮದಾಗಿಸಿಕೊಂಡರು.
ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಥಾಯ್ಲೆಂಡ್ನಲ್ಲಿ ನಡೆದ ವಿಶ್ವ ಚಾಂಪಿಯನ್ಷಿಪ್ನಲ್ಲಿ ಮೀರಾಬಾಯಿ 201 ಕೆಜಿ ಭಾರ ಎತ್ತಿದ್ದರು. ಇದೀಗ ಎರಡು ಕೆ.ಜಿ ಹೆಚ್ಚಿನ ಬಾರ ಎತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ