ಇಂದೋರ್:
ಲೋಕಸಭಾ ಸ್ಪೀಕರ್, ಇಂಧೋರ್‌ನ ಬಿಜೆಪಿ ಸಂಸದೆ ಸುಮಿತ್ರಾ ಮಹಾಜನ್ ಅವರು ನಾನು ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಶುಕ್ರವಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೋಕಸಭೆಗೆ ನಡೆಯುತ್ತಿರುವ 7 ಹಂತಗಳ ಚುನಾವಣೆಯಲ್ಲಿ ಕೊನೆಯ ಹಂತದಲ್ಲಿ ಇಂದೋರ್ನಲ್ಲಿ ಚುನಾವಣೆ ನಡೆಯಲಿದ್ದು, ಮೇ19ರಂದು ಮತದಾನ ನಡೆಯಲಿದೆ.
ಬಿಜೆಪಿ ಇದುವರೆಗೆ ಹಲವು ಬಾರಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದರೂ, ಇಂದೋರ್ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ. ತಮಗೇ ಟಿಕೆಟ್ ದೊರೆಯುವ ನಿರೀಕ್ಷೆಯಲ್ಲಿದ್ದ ಸುಮಿತ್ರಾ ಮಹಾಜನ್ ಅವರಿಗೆ ಇದರಿಂದ ನಿರಾಶೆಯಾಗಿತ್ತು.
Lok Sabha Speaker Sumitra Mahajan says she doesn't want to contest the 2019 elections, appeals to party to name a candidate from Indore (file pic) pic.twitter.com/smnF7RKxg7
— ANI (@ANI) April 5, 2019
ಈ ವಾರ 76ನೇ ವರ್ಷಕ್ಕೆ ಕಾಲಿಡುತ್ತಿರುವ ಸುಮಿತ್ರಾ ಮಹಾಜನ್, ಇಂದೋರ್‌ನಿಂದ ಟಿಕೆಟ್ ವಿಚಾರದಲ್ಲಿ ಪಕ್ಷದ ನಾಯಕರ ಜತೆ ಚರ್ಚಿಸಿದ್ದಾಗಿ ತಿಳಿಸಿದ್ದು, ಅಂತಿಮ ನಿರ್ಧಾರ ಅವರಿಗೇ ಬಿಟ್ಟಿದ್ದು. ಅವರ ಗೊಂದಲ ನಿವಾರಿಸುವುದಕ್ಕಾಗಿ ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಬಯಸುವುದಿಲ್ಲ ಎಂದು ಘೋಷಿಸುತ್ತಿದ್ದೇನೆ. ಪಕ್ಷ ಮುಕ್ತವಾಗಿ ನಿರ್ಧಾರ ಕೈಗೊಳ್ಳಬಹುದು. ಶೀಘ್ರವೇ ಇಂದೋರ್ ಅಭ್ಯರ್ಥಿ ಹೆಸರು ಪ್ರಕಟವಾಗಲಿದೆ ಎಂಬ ಭರವಸೆ ಹೊಂದಿದ್ದೇನೆ’ ಎಂದು ಅವರು ಹೇಳಿದ್ದಾರೆ.
ಇಂದೋರ್‌ನ ಜನರ ಪಾಲಿಗೆ ‘ತಾಯಿ’ ಎಂದೇ ಖ್ಯಾತರಾದ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್, ಇಂದೋರ್‌ನಿಂದ ಸತತ 8 ಬಾರಿ ಗೆದ್ದು ಬಂದಿರುವ ಅವರು ಈ ಬಾರಿ ಕಣಕ್ಕಿಳಿಯುವುದಿಲ್ಲ ಎಂದು ಘೋಷಿಸಿರುವುದು ಇಲ್ಲಿನ ಜನತೆಗೆ ಆಘಾತ ಉಂಟುಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
