ಮ್ಯಾಂಚೆಸ್ಟರ್:
ಪಾಕಿಸ್ಥಾನ ವಿರುದ್ಧದ ಮಹತ್ವದ ಪಂದ್ಯ ಗೆದ್ದ ಖುಷಿಯಲ್ಲಿರುವ ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ನಂತರ ಭಾರತದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಪಂದ್ಯದಿಂದ ಹೊರ ನಡೆದಿದ್ದಾರೆ.
ಪಾಕ್ ವಿರುದ್ಧದ ಪಂದ್ಯದಲ್ಲಿ ಇನ್ನಿಂಗ್ಸ್ ನ 5ನೇ ಓವರ್ ಎಸೆಯುತ್ತಿದ್ದ ಭುವಿ ನಾಲ್ಕನೇ ಎಸೆತದ ವೇಳೆ ಫುಟ್ ಮಾರ್ಕ್ ನಲ್ಲಿ ಜಾರಿ ಮಂಡಿರಜ್ಜು ಸೆಳೆತಕ್ಕೆ ಒಳಗಾಗಿದ್ದರು. ಕೂಡಲೇ ತಂಡದ ಫಿಸಿಯೋ ಪ್ಯಾಟ್ರಿಕ್ ಸಲಹೆಯಂತೆ ಮೈದಾನದಿಂದ ಹೊರನಡೆದ ಭುವಿ ನಂತರ ಆಟದಿಂದ ದೂರ ಉಳಿಯಬೇಕಾಯಿತು. ಭುವಿ ಖಾತೆಯ ಓವರ್ ಗಳನ್ನು ವಿಜಯ್ ಶಂಕರ್ ಎಸೆದರು.
ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ವಿರಾಟ್, ಭುವಿಯ ಗಾಯ ಅಷ್ಟೇನೂ ಗಂಭೀರವಾಗಿ ಇಲ್ಲ. ಅವರು ಆದಷ್ಟು ಬೇಗ ಗುಣಮುಖರಾಗುತ್ತಾರೆ. ಹೆಚ್ಚೆಂದರೆ ಎರಡೂ ಮೂರು ಪಂದ್ಯಗಳಿಗಷ್ಟೇ ಭುವಿ ಲಭ್ಯವಾಗುವುದಿಲ್ಲ. ಅವರ ಸ್ಥಾನವನ್ನು ಶಮಿ ತುಂಬಲಿದ್ದಾರೆ ಎಂದರು.
ವಿಶ್ವಕಪ್ ನಲ್ಲಿ ಭಾರತ, ಪಾಕಿಸ್ತಾನದ ವಿರುದ್ಧ ಡಕ್ವರ್ಥ್ ಲೂಯಿಸ್ ನಿಯಮದನ್ವಯ 89 ರನ್‍ಗಳ ಭರ್ಜರಿ ಗೆಲುವು ಸಾಧಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ