ನೀವೂ ಆಲಿಸಬಹುದು ಮಹಾತ್ಮಾಗಾಂಧಿ ಹೃದಯ ಬಡಿತ..!

ನವದೆಹಲಿ:

      ದೆಹಲಿಯ ನ್ಯಾಷನಲ್ ಗಾಂಧಿ ಮ್ಯೂಸಿಯಂಗೆ ಭೇಟಿ ನೀಡಿದರೆ ಅಲ್ಲಿ ಮಹಾತ್ಮ ಗಾಂಧಿಯವರ ಹೃದಯ ಬಡಿತವನ್ನು ಕೇಳಬಹುದು. 

      ಮಹಾತ್ಮ ಗಾಂಧಿಯವರ ಹೃದಯ ಬಡಿತವನ್ನು ಇಲ್ಲಿ ಮರುಸೃಷ್ಟಿ ಮಾಡಿದ್ದು, ಗಾಂಧಿ ಜಯಂತಿಯಂದು ಈ ಡಿಜಿಟಲ್ ವ್ಯವಸ್ಥೆ ಉದ್ಘಾಟನೆಯಾಗಲಿದೆ.

      ಗಾಂಧೀಜಿ ಅವರು 1934ರಲ್ಲಿ ಮಾಡಿಸಿಕೊಂಡಿದ್ದ ಇಸಿಜಿ ಪರೀಕ್ಷೆಯ ವರದಿಯ ಆಧಾರದ ಮೇಲೆ ಡಿಜಿಟಲ್‌ ರೂಪದಲ್ಲಿ ಅವರ ಹೃದಯ ಬಡಿತವನ್ನು ಕೃತಕವಾಗಿ ಸೃಷ್ಟಿಸಲಾಗಿದೆ. ಅಕ್ಟೋಬರ್‌ 2ರಂದು ಇದನ್ನು ಅನಾವರಣಗೊಳಿಸಲಾಗುವುದು. ಮ್ಯೂಸಿಯಂಗೆ ಭೇಟಿ ಕೊಡುವ ವೀಕ್ಷಕರಿಗೆ ಇದೊಂದು ವಿಶೇಷ ಅನುಭವ ನೀಡಲಿದೆ ಎಂದು ವಸ್ತು ಸಂಗ್ರಹಾಲಯದ ನಿರ್ದೇಶಕ ಎ.ಅಣ್ಣಾಮಲೈ ತಿಳಿಸಿದ್ದಾರೆ.

      ಗಾಂಧೀಜಿ ಅವರ ಜೀವನಗಾಥೆಯ ಅಪರೂಪದ ಚಿತ್ರಗಳು, ಭಾಷಣದ ಧ್ವನಿ ಸುರಳಿಗಳು, ಭಜನ್‌ಗಳು ಹಾಗೂ ಸಾಬರಮತಿ ಆಶ್ರಮದ ವರ್ಚುವಲ್‌ ಟೂರ್‌, ಎ.ಕೆ.ಚೆಟ್ಟಿಯಾರ್‌ ಅವರ ‘ಮಹಾತ್ಮ ಗಾಂಧಿ: 20ನೇ ಶತಮಾನದ ಪ್ರವಾದಿ’ ಸಾಕ್ಷ್ಯಚಿತ್ರ ಹೀಗೆ ಅನೇಕ ವಿಶೇಷ ಸಂಗತಿಗಳಿರುವ ‘ಡಿಜಿಟಲ್‌ ಮಲ್ಟಿಮಿಡಿಯಾ ಕಿಟ್‌’ ಅಕ್ಟೋಬರ್‌ 1ರಂದು ಬಿಡುಗಡೆ ಮಾಡಲಾಗುವುದು. 

      ಈ ಕಿಟ್‌ನಲ್ಲಿ ಒಂದು ಪೆನ್‌ ಡ್ರೈವ್‌ ಹಾಗೂ 10 ಪುಸ್ತಕಗಳು ಸೇರಿದ್ದು, ಇದರ ಬೆಲೆ 300 ರೂ. ಆಗಿದೆ. ನಂತರದಲ್ಲಿ 100 ರೂ.ಗೆ ಮಾರಾಟ ಮಾಡುವ ಗುರಿಯನ್ನು ಹೊಂದಲಾಗಿದೆ. ಗಾಂಧಿ ಅವರನ್ನು ವೈಚಾರಿಕವಾಗಿಯಷ್ಟೇ ಅಲ್ಲದೇ ಭಾವನಾತ್ಮಕವಾಗಿಯೂ ಯುವ ಜನತೆಗೆ ಹತ್ತಿರವಾಗಿಸುವ ಪ್ರಯತ್ನ ಇದರ ಹಿಂದಿದೆ ಎನ್ನುತ್ತಾರೆ ಅವರು. ‘ಅಹಿಂಸೆ ಮತ್ತು ವಿಶ್ವಶಾಂತಿ’ ಧ್ಯೇಯದಡಿ ಛಾಯಾಚಿತ್ರ ಪ್ರದರ್ಶನವೂ ನಡೆಯಲಿದೆ. 

      ಗಾಂಧೀಜಿಯವರ ಆರೋಗ್ಯ ಬಗ್ಗೆ ಇರುವ ಪ್ರಧಾನ ಮಾಹಿತಿಗಳನ್ನು ಆಲ್ ಇಂಡಿಯಾ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಶೀಘ್ರದಲ್ಲೇ ಪ್ರಕಟಿಸಲಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap