
ಈವರೆಗೆ ಸರೆಗಮಪ ಸಂಗೀತ ಕಾರ್ಯಕ್ರಮ 14 ಸೀಜನ್ಗಳನ್ನು ಯಶಸ್ವಿಯಾಗಿ ಮುಗಿಸಿದೆ. ಈಗ 15ನೇ ಸೀಜನ್ ಆರಂಭಕ್ಕೆ ವೇದಿಕೆಯನ್ನು ಸಿದ್ದಪಡಿಸಿದೆ.
ಈ ಸೀಜನ್ನಲ್ಲಿ ನಾದಬ್ರಹ್ಮ ಹಂಸಲೇಖ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕರಾದ ವಿಜಯ ಪ್ರಕಾಶ್ ಅಲ್ಲದೆ ರಾಜೇಶ್ ಕೃಷ್ಣನ್ ಕೂಡ ಕಾರ್ಯಕ್ರಮದ ನಿರ್ಣಾಯಕರ ಸ್ಥಾನದಲ್ಲಿರುತ್ತಾರೆ. ಕಳೆದ ವರ್ಷ ಈ ಕಾರ್ಯಕ್ರಮದಿಂದ ದೂರ ಉಳಿದಿದ್ದ ಗಾಯಕ ರಾಜೇಶ್ ಕೃಷ್ಣನ್ ಅವರು ಈಬಾರಿ ತನ್ನ ಗುರುಗಳಾದ ಹಂಸಲೇಖ ಅವರ ಕರೆಗೆ ಓಗೊಟ್ಟು ಮತ್ತೆ ಎಂಟ್ರಿಯಾಗಿದ್ದಾರೆ.
![]()
ಈ ಸಂಗೀತ ಕಾರ್ಯಕ್ರಮದ ರೂಪುರೇಶೆಗಳನ್ನು ಮಾಧ್ಯಮಗಳಿಗೆ ತಿಳಿಸಲೆಂದು ನಿನ್ನೆ ಪತ್ರಿಕಾ ಗೋಷ್ಟಿಯನ್ನು ಜೀ ವಾಹಿನಿ ತಂಡ ಏರ್ಪಡಿಸಿತ್ತು, ಈ ಸಂದರ್ಭದಲ್ಲಿ ಜೀ ವಾಹಿನಿಯ ಪರವಾಗಿ ರಾಘವೇಂದ್ರ ಹುಣಸೂರು, ಕಾರ್ಯಕ್ರಮದ ಜಡ್ಜ್ ಗಳಾದ ಹಂಸಲೇಖಾ, ಅರ್ಜುನ್ ಜನ್ಯ, ವಿಜಯಪ್ರಕಾಶ್ ಹಾಗೂ ರಾಜೇಶ್ ಕೃಷ್ಣನ್ ಕೂಡ ಹಾಜರಿದ್ದು ಈ ಹೊಸ ಕಾನ್ಸೆಪ್ಟ್ ಬಗ್ಗೆ ಸವಿವರವಾಗಿ ಮಾತನಾಡಿದರು.
ಎಂದಿನಂತೆ ಈ ಸಲವೂ ನಾಡಿನುದ್ದಗಲಕ್ಕೂ ಸಂಚರಿಸಿ ಹಲವಾರು ಪ್ರತಿಭೆಗಳನ್ನು ಗುರ್ತಿಸಿ ಅವರಲ್ಲಿ ಉತ್ತಮರೆನಿಸಿದ 35 ಜನರನ್ನು ಆಯ್ಕೆ ಮಡಿ ಸರಿಗಮಪ ವೇದಿಕೆಗೆ ಕರೆತರುತ್ತಿದ್ದಾರೆ, ಇದೇ ಶನಿವಾರದಿಂದ ಈ ಕಾರ್ಯಕ್ರಮ ಸಂಜೆ 7-30ಕ್ಕೆ ಪ್ರಸಾರವಾಗಲಿದೆ. ಶನಿವಾರ ಹಾಗೂ ಭಾನುವಾರ ಅಂದರೆ ವೀಕೆಂಡ್ನಲ್ಲಿ ಸರಿಗಮಪ 15 ಜೀ ಕನ್ನಡ ಪ್ರೇಕ್ಷಕರ ಮನೆಯ ಕಿರುತೆರೆಯಲ್ಲಿ ರಾರಾಜಿಸಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಹಂಸಲೇಖ ನಾವಾಡುವ ಎಲ್ಲ ಮಾತುಗಳಿಗೂ ಜೀ ವಾಹಿನಿ ವೇದಿಕೆಯನ್ನು ಕಲ್ಪಿಸಿದೆ. ಈ 5 ತಿಂಗಳಲ್ಲಿ ನಾನು ಬಹಳಷ್ಟು ಕಡೆ ಅಭಿಮಾನಿಗಳನ್ನು ಸಂಪರ್ಕಿಸಿದ್ದೇನೆ. ನನ್ನ ಹಾಗೂ ರಾಜೇಶ್ ಕೃಷ್ಣನ್ ಅವರದು ಬರೀ ಸ್ನೇಹ ಅಲ್ಲ, ಬಾಂಧವ್ಯ. ನಮಗೆ ಗೊತ್ತಿಲ್ಲದ ಹಾಗೆ ಒಂದು ಗುರು ಶಿಶ್ಯರ ಪರಂಪರೆ ಬೆಳೆದು ಬಂದಿದೆ. 10ರಿಂದ 12 ಜನ ಶಿಶ್ಯರು ಈ ಪರಂಪರೆಯಲ್ಲಿ ಬೆಳದಿದ್ದಾರೆ. ಇಲ್ಲಿ ಇಬ್ಬರು ಟ್ರೂ ಸಿಂಗರ್ಸ್ ಇದ್ದಾರೆ, ಅಲ್ಲದೆ ಮತ್ತಿಬ್ಬರು ಟ್ರೂ ಮ್ಯೂಸಿಕ್ ಕಂಪೋಜರ್ಸ್ ಕೂಡ ಇದ್ದಾರೆ. ಈ ಬಾರಿ ಪ್ರತಿ ಕಂಟೆಸ್ಟೆಂಟ್ ಮಾಸ್ಟರ್ ಕ್ಲಾಸ್ನಲ್ಲಿ ಬರಬೇಕಿದೆ ಎಂದು ಹೇಳಿದರು.
ನಂತರ ಗಾಯಕ ರಾಜೇಶ್ ಕೃಷ್ಣನ್ ಮಾತನಾಡಿ ಕಳೆದ ವರ್ಷ ನಮ್ಮ ತಂದೆಯ ಅಗಲಿಕೆ ಬೇಸರ ತಂದಿತ್ತು. ಈಗ ಮತ್ತೆ ನಾನು ಇಲ್ಲಿಗೆ ಬರಲು ಕಾರಣ ನನ್ನ ಗುರುಗಳು. ಮತ್ತೊಮ್ಮೆ ಗೆಳೆಯರೆಲ್ಲರ ಜೊತೆ ಬೆರೆಯುವುದಕ್ಕೆ ಖುಷಿಯಾಗುತ್ತಿದೆ ಎಂದು ಹೇಳಿದರು.
ಕೊನೆಯಲ್ಲಿ ಜೀ ವಾಹಿನಿಯ ರಾಘವೇಂದ್ರ ಹುಣಸೂರ್ ಮಾತನಾಡುತ್ತ ಸರಿಗಮಪ ಸೀಜನ್ 15ಗಾಗಿ ಈ ಬಾರಿ ರಾಜ್ಯದ 30 ಜಿಲ್ಲೆಗಳಲ್ಲೂ ಸಂಚರಿಸಿ 30 ಜನರನ್ನು ಫೈನಲಿಸ್ಟ್ಗೆ ತಂದಿದೇವೆ. ಇದರಲ್ಲಿ ಕೊಡಗು ಜಿಲ್ಲೆಯನ್ನು ಬಿಟ್ಟು ಉಳಿದೆಲ್ಲ ಜಿಲ್ಲಾ ಕೇಂದ್ರಗಳಲ್ಲೂ ಆಡಿಷನ್ ಮಾಡಿದ್ದೇವೆ, ಸುಮಾರು 4ರಿಂದ 5 ಲಕ್ಷ ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿದ್ದರು ಎಂದು ಹೇಳಿದರು. ರಾಜ್ಯದ ಯಾವುದೇ ಪ್ರತಿಭಾವಂತರೂ ಮಿಸ್ ಆಗಬಾರದು ಎನ್ನುವುದೇ ನಮ್ಮ ಉದ್ದೇಶ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








