ಜಿಂಬಾಬ್ವೆ ಉಕ್ಕಿನ ಮನುಷ್ಯ ರಾಬರ್ಟ್‌ ಮುಗಾಬೆ ನಿಧನ!

ಹರಾರೆ:

     ‘ಜಿಂಬಾಬ್ವೆ ಆಫ್ರಿಕನ್ ನ್ಯಾಷನಲ್ ಯೂನಿಯ‌ನ್-ಪೆಟ್ರಿಯಾಟಿಕ್ ಫ್ರಂಟ್’ ಮುಖ್ಯಸ್ಥ, ಮಾಜಿ ಅಧ್ಯಕ್ಷ, ಉಕ್ಕಿನ ಮನುಷ್ಯ ರಾಬರ್ಟ್ ಮುಗಾಬೆ ನಿಧನರಾಗಿದ್ದಾರೆ.

      94 ವರ್ಷ ವಯಸ್ಸಿನ ಮುಗಾಬೆ, ಕಳೆದ ಕೆಲ ತಿಂಗಳಿನಿಂದ ಸಿಂಗಪುರದಲ್ಲಿ ವಯೋಸಹಜ ಅಸ್ವಸ್ಥ ಸ್ಥಿತಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ ಎಂದು ಶುಕ್ರವಾರದಂದು ಅಧಿಕೃತವಾಗಿ ಪ್ರಕಟಿಸಲಾಗಿದೆ.

      ಸುಮಾರು 3 ದಶಕಗಳಿಗೂ ಹೆಚ್ಚು ಕಾಲ ಜಿಂಬಾಬ್ವೆ ಅಧ್ಯಕ್ಷರಾಗಿದ್ದ ಮುಗಾಬೆ ಸುದೀರ್ಘ ಆಡಳಿತ ನಡೆಸಿದ್ದರು. 37 ವರ್ಷಗಳ ಆಡಳಿತದ ನಂತರ ಕೊನೆಗೂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

      1980ಕ್ಕೂ ಮೊದಲು ಜಿಂಬಾಬ್ವೆ ಬ್ರಿಟಿಷರ ವಸಾಹತುವಾಗಿತ್ತು. ಈ ಸಮಯದಲ್ಲಿ ಉಗ್ರ ಕ್ರಾಂತಿಯಾಕಾರಿಯಾಗಿದ್ದ ಮುಗಾಬೆ ಬಿಳಿಯರಿಂದ ಜಿಂಬಾಬ್ವೆಗೆ ಮುಕ್ತಿ ಕೊಡಿಸಿದ ಧೀರ ಹೋರಾಟಗಾರ. ಹೀಗಾಗಿಯೇ ಇವರನ್ನು ಜಿಂಬಾಬ್ವೆ ಉಕ್ಕಿನ ಮನುಷ್ಯ ಎನ್ನಲಾಗಿದೆ.

      ಜಿಂಬಾಬ್ವೆಯ ಸಂಸ್ಥಾಪಕ ಮತ್ತು ಮಾಜಿ ಅಧ್ಯಕ್ಷ ರಾಬರ್ಟ್ ಮುಗಾಬೆ ಅವರ ನಿಧನವನ್ನು ಅತ್ಯಂತ ದುಃಖದಿಂದ ಘೋಷಿಸುತ್ತಿದ್ದೇನೆ. ಮುಗಾಬೆ ವಿಮೋಚನೆಯ ಹರಿಕಾರರಾಗಿದ್ದು, ತಮ್ಮ ಜನರ ವಿಮೋಚನೆ ಮತ್ತು ಸಬಲೀಕರಣಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟರು. ನಮ್ಮ ರಾಷ್ಟ್ರ ಮತ್ತು ಖಂಡದ ಇತಿಹಾಸಕ್ಕೆ ಅವರು ನೀಡಿದ ಕೊಡುಗೆಯನ್ನು ಎಂದಿಗೂ ಮರೆಯಲಾಗುವುದಿಲ್ಲ. ಅವರ ಆತ್ಮವು ಶಾಶ್ವತ ಶಾಂತಿಯಿಂದ ವಿಶ್ರಾಂತಿ ಪಡೆಯಲಿ ಎಂದು ಎಮ್ಮರ್ಸನ್ ಟ್ವೀಟ್ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap