ಜ.1 ರಂದು ದೇಶದಲ್ಲಿ 67,385 ಮಕ್ಕಳ ಜನನ!!

ದೆಹಲಿ:

      ನಿನ್ನೆ 2020ನೇ ಜನವರಿ 1 ರಂದು ಭಾರತದಲ್ಲಿ ಒಟ್ಟು 67,385 ಮಕ್ಕಳ ಜನನವಾಗಿದೆ. ಇದು ವಿಶ್ವದಲ್ಲೇ ಅತೀ ಹೆಚ್ಚು. ಅಂದರೆ ಜನವರಿ 1 ರಂದು ಹುಟ್ಟಿದ ಮಕ್ಕಳ ಸಂಖ್ಯೆ ವಿಚಾರದಲ್ಲಿ ಭಾರತವೇ ವಿಶ್ವಕ್ಕೆ ಪ್ರಥಮ ಎನಿಸಿಕೊಂಡಿದೆ.

      ಯುನಿಸೆಫ್ ಬಿಡುಗಡೆ ಮಾಡಿರುವ ಅಂಕಿ ಅಂಶದಿಂದ ಈ ಮಾಹಿತಿ ಹೊರಬಿದ್ದಿದ್ದು ಜಗತ್ತಿನಲ್ಲಿ ಹೊಸ ವರ್ಷದಂದು ಜನಿಸಿದ ಅಂದಾಜು 3,92,078 ಶಿಶುಗಳಲ್ಲಿ ಶೇಕಡಾ 17ರಷ್ಟು ಶಿಶುಗಳು ಭಾರತದಲ್ಲಿ ಜನಿಸಿವೆ.

      ಜಗತ್ತಿನಲ್ಲಿಯೇ ಜನವರಿ 1ರಂದು ಹುಟ್ಟಿದ ಶಿಶುಗಳ ಸಂಖ್ಯೆ ಭಾರತದಲ್ಲಿ ಹೆಚ್ಚಾಗಿದ್ದು ಮೊದಲ ಸ್ಥಾನ ಪಡೆದಿದೆ. ನಂತರದ ಸ್ಥಾನದಲ್ಲಿ ಚೀನಾ(46,299), ನೈಜೀರಿಯಾ(26,039), ಪಾಕಿಸ್ತಾನ(16,787), ಇಂಡೋನೇಷ್ಯಾ(13,020) ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ(10,452) ಆಗಿವೆ.

       ಹೊಸವರ್ಷದ ದಿನ ಅಂದರೆ ಜನವರಿ 1 ರಂದು ಹುಟ್ಟಿದ ದಿನ ಅಂದರೆ ನಿಜಕ್ಕೂ ಅದೊಂಥರಾ ಸ್ಪೆಷಲ್. ಅಂತಹ ಸ್ಪೆಷಲ್ ಕ್ಷಣಕ್ಕೆ ನಿನ್ನೆಯೂ ಹಲವು ಮಕ್ಕಳು ಸಾಕ್ಷಿಯಾಗಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap