‘ನಿರ್ಮಲಾ ಸೌಜನ್ಯದ ನಡೆ ನನ್ನನ್ನು ತಟ್ಟಿತು’- ತರೂರ್

ತಿರುವನಂತಪುರಂ:

      ‘ನಿರ್ಮಲಾ ಸೀತಾರಾಮನ್ ಅವರ ಸೌಜನ್ಯದ ನಡೆ ನನ್ನನ್ನು ತಟ್ಟಿತು’ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್  ಬಿಜೆಪಿ ನಾಯಕಿ ನಿರ್ಮಲಾ ಸೀತಾರಾಮನ್ ಅವರ ಬಗ್ಗೆ ಹೊಗಳಿಕೆಯ ಮಾತನ್ನಾಡಿದ್ದಾರೆ.

     ಕೇರಳದ ಗಾಂಧಾರಿ ಅಮನ್ ಕೋವಿಲ್ ದೇವಸ್ಥಾನದಲ್ಲಿ ಅಚಾನಕ್ಕಾಗಿ ಬಿದ್ದ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರ ತಲೆಗೆ ತೀವ್ರವಾಗಿ ಗಾಯವಾಗಿತ್ತು. ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

      ಲೋಕಸಭಾ ಚುನಾವಣಾ ಪ್ರಚಾರಕ್ಕೆಂದು ಕೇರಳಕ್ಕೆ ತೆರಳಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶಶಿ ತರೂರ್ ಅವರಿದ್ದ ಆಸ್ಪತ್ರೆಗೆ ತೆರಳಿ, ಅವರ ಕುಶಲ ವಿಚಾರಿಸಿದರು. ಕೈಕುಲುಕಿ ಬೇಗ ಗುಣಮುಖರಾಗುವಂತೆ ಹಾರೈಸಿದರು. ಅವರ ಅನಿರೀಕ್ಷಿತ ಭೇಟಿಯ ನಂತರ ಮನದುಂಬಿ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.

       ‘ಮಾನವೀಯತೆ ಭಾರತದ ರಾಜಕಾರಣದ ಪ್ರಮುಖ ಆಧಾರಸ್ತಂಭವಾಗಿದ್ದು, ತಮ್ಮ ಬಿಡುವಿರದ ಚುನಾವಣಾ ಪ್ರಚಾರದ ಮಧ್ಯೆಯೂ ತಮ್ಮ ಆರೋಗ್ಯ ವಿಚಾರಿಸಿದ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದ.’ ಎಂದು ಹೇಳಿದ್ದಾರೆ.

Recent Articles

spot_img

Related Stories

Share via
Copy link
Powered by Social Snap