ವೈದ್ಯರು ಸತ್ತಿದ್ದಾನೆಂದು ಹೇಳಿದ ವ್ಯಕ್ತಿ ಶವಾಗಾರದಲ್ಲಿ ಎದ್ದು ಕೂತಿದ್ದ!!

ಮಧ್ಯಪ್ರದೇಶ:

      72 ವರ್ಷದ ಕಿಷನ್​ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ರಸ್ತೆಯಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದ ಅವರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಪರಿಶೀಲಿಸಿದ ವೈದ್ಯರು ಅವರು ಸಾವನ್ನಪ್ಪಿರುವುದಾಗಿ ಘೋಷಿಸಿದ್ದರು.

  ಚತರ್ಪುರ ಜಿಲ್ಲೆಯ ನೌಗಾಂವ್​ ನಿವಾಸಿ ಕಿಷನ್ ಅವರನ್ನು ಬಿನಾ ನಗರದ ಸರ್ಕಾರಿ  ಆಸ್ಪತ್ರೆಗೆ ಸೇರಿಸಿದಾಗ ಸತ್ತುಹೋಗಿರುವುದಾಗಿ ವೈದ್ಯರು ಘೋಷಿಸಿದ್ದರು. ಆದರೆ, ಮಾರನೇ ದಿನ ಶವಾಗಾರದಿಂದ ಕಿಷನ್​ ಅವರ ದೇಹವನ್ನು ತೆಗೆಯುವ ವೇಳೆ ಅವರು  ದ್ದುದು ಗಮನಕ್ಕೆ ಬಂದಿತು.

   ಈ ಬಗ್ಗೆ ಪೊಲೀಸರಿಗೆ ಪತ್ರವನ್ನೂ ಕಳುಹಿಸಿದ್ದರು. ಅಸಲಿಗೆ ಆ ವ್ಯಕ್ತಿ ಸತ್ತೇ ಇರಲಿಲ್ಲ. ಮಾರನೇ   ದಿನ ಬೆಳಗ್ಗೆ ಪೊಲೀಸರು ತಪಾಸಣೆಗೆಂದು ಶವಾಗಾರಕ್ಕೆ ಬಂದಾಗ ಆ ವ್ಯಕ್ತಿ  ಉಸಿರಾಡುತ್ತಿದ್ದರು. ಬಳಿಕ, ಅವರಿಗೆ ತುರ್ತು ಚಿಕಿತ್ಸೆ ನೀಡಲಾಯಿತಾದರೂ     ಚಿಕಿತ್ಸೆ ಫಲಕಾರಿಯಾಗದೆ  ಆ ದಿನ ಸಂಜೆ ಸಾವನ್ನಪ್ಪಿದ್ದರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link