ಭೂಮಿಯ ಮೊದಲ ಫೋಟೋ ಕಳುಹಿಸಿದ ಚಂದ್ರಯಾನ-2

ನವದೆಹಲಿ: 

   ಜುಲೈ 22ರಂದು ಚಂದ್ರಯಾನ-2 ಉಪಗ್ರಹವನ್ನು ಹೊತ್ತ ರಾಕೆಟ್ ಯಶಸ್ವಿಯಾಗಿ ನಭಕ್ಕೆ ಹಾರಿತ್ತು. ಚಂದ್ರನ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು ಚಂದ್ರಯಾನ-2 ಉಪಗ್ರಹವನ್ನು ಚಂದ್ರನ ಅಂಗಳವನ್ನು ತಲುಪುವುದನ್ನೇ ಇಸ್ರೋ ವಿಜ್ಞಾನಿಗಳು ಕಾದುಕುಳಿತ್ತಿದ್ದಾರೆ. ಈ ನಡುವೆ ಬಾಹ್ಯಾಕಾಶದಿಂದ ಚಂದ್ರಯಾನ-2 ಭೂಮಿಯ ಮೊದಲ ಫೋಟೋ ಕ್ಲಿಕ್ಕಿಸಿ ಕಳುಹಿಸಿದೆ.

ಕಳೆದ ವಾರ ಚಂದ್ರಯಾನ-2 ಭೂಮಿಯ ಮೊದಲ ಫೋಟೋ ಕಳುಹಿಸಿದೆ ಎಂದು ಭೂಮಿಯ ಹೈ ರೆಸೆಲ್ಯೂಶನ್ ಫೋಟೋವನ್ನು ಕಿಡಿಗೇಡಿಗಳು ಗೂಗಲ್ ಮಾಡಿ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದರು. ಇಸ್ರೋ ಈ ಫೋಟೋ ಬಿಡುಗಡೆ ಮಾಡಲಾಗಿದೆ ಎನ್ನುವ ಸುಳ್ಳು ಸುದ್ದಿ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿತ್ತು. ಇದೇ ಬೆನ್ನಲ್ಲಿ ಶನಿವಾರದಂದು 17:28 ಯುನಿವರ್ಸಲ್ ಟೈಮ್‍ಗೆ ಬಾಹ್ಯಾಕಾಶದಲ್ಲಿ ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ಎಲ್‍ಐ4 ಕ್ಯಾಮೆರಾ ಮೂಲಕ ಭೂಮಿಯ ಮೊದಲ ಚಿತ್ರವನ್ನು ಕ್ಲಿಕ್ಕಿಸಿದೆ.

ಈ ಫೋಟೋವನ್ನು ಸ್ವತಃ ಇಸ್ರೋ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ಮೂಲಕ ಎಲ್‍ಐ4 ಕ್ಯಾಮೆರಾದಲ್ಲಿ ಸೆರೆಯಾಗಿರುವ ಭೂಮಿಯ ಸುಂದರ ಚಿತ್ರಗಳು ಎಂದು ಬರೆದು ಫೋಟೋದೊಂದಿಗೆ ಇಸ್ರೋ ಟ್ವೀಟ್ ಮಾಡಿದೆ.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link