ನ್ಯೂಇಯರ್ ಗಿಫ್ಟ್ ​: ಜಿಯೋದಿಂದ ಎಲ್ಲಾ ನೆಟ್ ವರ್ಕ್’ಗೆ ಕರೆ ಶುಲ್ಕ ಉಚಿತ!!

ನವದೆಹಲಿ : 

     ಡಾಟಾ ಪ್ಯಾಕ್​, ಕರೆಗಳ ದರ ಎಲ್ಲದರಲ್ಲಿಯೂ ಅತ್ಯಂತ ಕಡಿಮೆ ದರವಿಟ್ಟು, ತನ್ನ ಗ್ರಾಹಕರಿಗೆ ಭಾರಿ ಅನುಕೂಲ ಕಲ್ಪಿಸುತ್ತಿರುವ ಜಿಯೋ, ನಾಳೆಯಿಂದ ಧ್ವನಿ (voice call) ಕರೆಗಳ ಶುಲ್ಕವನ್ನು ಉಚಿತವಾಗಿಸಿದೆ.

     ಜಿಯೋ ನೆಟ್​ವರ್ಕ್​ನಿಂದ ಜಿಯೋ ನೆಟ್​ವರ್ಕ್​ ಹೊಂದಿರುವ ಗ್ರಾಹಕರಿಗೆ ಉಚಿತ ಸೇವೆಯನ್ನು ಒದಗಿಸಲಾಗುತ್ತಿದ್ದು, ಇತರ ನೆಟ್​ವರ್ಕ್​ಗಳಿಗೆ ಕರೆ ಮಾಡಿದರೆ ನಿಮಿಷಕ್ಕೆ ಆರು ಪೈಸೆ ತಗುಲುತ್ತಿತ್ತು. ಇದೀಗ ಆ ಸೇವೆಯನ್ನೂ ಅಂತಿಮಗೊಳಿಸಿರುವ ಜಿಯೋ, ಇದೀಗ ಎಲ್ಲಾ ನೆಟ್​ವರ್ಕ್​ಗಳಿಗೂ ಉಚಿತ ಕರೆ ಸೇವೆಯನ್ನು ಒದಗಿಸಿದೆ. ಇದರ ಅರ್ಥ ಜಿಯೋ ಸಿಮ್​ ಉಳ್ಳವರು ಯಾವುದೇ ಕಂಪೆನಿಯ ಸಿಮ್​ ಉಳ್ಳ ಗ್ರಾಹಕರಿಗೆ ಉಚಿತವಾಗಿ ಕರೆ ಮಾಡಬಹುದು. ನಿಮಿಷಕ್ಕೆ ಆರು ಪೈಸೆ ತಗುತ್ತಿರುವ ಯೋಜನೆಗೆ ಇಂದೇ ಕೊನೆಯಾಗಲಿದ್ದು, 2021ರ ಜನವರಿ 1ರಿಂದ ಹೊಸ ವರ್ಷದಿಂದ ಎಲ್ಲ ಕರೆಗಳ ಸೇವೆಗಳೂ ಉಚಿತ ಎಂದು ಜಿಯೋ ಘೋಷಿಸಿದೆ.

      ಇದಾಗಲೇ ಡಾಟಾ ಪ್ಯಾಕ್​, ಕರೆಗಳ ದರ ಎಲ್ಲದರಲ್ಲಿಯೂ ಅತ್ಯಂತ ಕಡಿಮೆ ದರವಿಟ್ಟು, ತನ್ನ ಗ್ರಾಹಕರಿಗೆ ಭಾರಿ ಅನುಕೂಲ ಕಲ್ಪಿಸುತ್ತಿರುವ ಜಿಯೋ, ನಾಳೆಯಿಂದ ಹೊಸ ವರ್ಷದ ಗಿಫ್ಟ್​ ನೀಡ  ಆಫ್ ನೆಟ್ ದೇಶೀಯ ಧ್ವನಿ (voice call) ಕರೆಗಳ ಶುಲ್ಕವನ್ನು ಶೂನ್ಯಕ್ಕಿಳಿಸುವ ಬದ್ಧತೆಯನ್ನು ಗೌರವಿಸಿ ಐಯುಸಿ ಶುಲ್ಕವನ್ನು ರದ್ದುಗೊಳಿಸಿದೆ. ಆ ನಿಟ್ಟಿನಲ್ಲಿ ಜಿಯೋ 2021ರ ಜನವರಿ 1ರಿಂದ ಉಚಿತ ಧ್ವನಿ ಕರೆ ಮಾಡಬಹುದಾಗಿದೆ ಎಂದು ಜಿಯೋ ತಿಳಿಸಿದೆ. ಜಿಯೋ ನೆಟ್ವರ್ಕ್ ಬಳಸಿ ಉಚಿತ ಧ್ವನಿ ಕರೆ ಮಾಡಬಹುದಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap