ಮುಂಬೈ:
ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಆರ್ಭಟಿಸುತ್ತಿರುವ ಮಳೆಯಿಂದ ರತ್ನಗಿರಿ ಜಿಲ್ಲೆಯ ಚಿಪ್ಲನ್ನಲ್ಲಿರುವ ತಿವಾರಿ ಹೆಸರಿನ ಚಿಕ್ಕ ಡ್ಯಾಂ ಒಡೆದು, ಪ್ರವಾಹವಾಗಿದೆ. ಡ್ಯಾಂ ತಟದಲ್ಲಿರುವ 7 ಗ್ರಾಮಗಳಿಗೆ ನೀರು ನುಗ್ಗಿದ್ದು, 22-24 ಮಂದಿ ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಎನ್ಡಿಆರ್ಎಫ್ಗೆ ಇಬ್ಬರು ಪುರುಷರ ಮೃತದೇಹಗಳು ಸಹ ಪತ್ತೆಯಾಗಿವೆ. ಡ್ಯಾಂ ಬಳಿಯೇ ಇದ್ದ 12 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ.
ಎನ್ಡಿಆರ್ಎಫ್, ಸ್ಥಳೀಯ ಆಡಳಿತರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ , ಪೊಲೀಸರು ಹಾಗೂ ಸ್ವಯಂಸೇವಕರು ತಮ್ಮ ರಕ್ಷಣಾ ಕಾರ್ಯ ಮುಂದುವರೆಸಿದ್ದಾರೆ. ಭಾನುವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಮುಂಬೈ ಸುತ್ತಮುತ್ತಲಿನ ಮನೆ ಗೋಡೆ ಕುಸಿತ ಹಾಗೂ ಮಳೆ ಸಂಬಂಧಿ ಘಟನೆಗಳಿಂದಾಗಿ 36 ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ. ಇನ್ನು ರಸ್ತೆ, ರೈಲ್ವೆ ಹಾಗೂ ವಿಮಾನ ಸಂಚಾರ ಸಹ ಅಸ್ತವ್ಯಸ್ತಗೊಂಡಿದೆ.