ಮೋದಿಗೆ ಮತ್ತೊಮ್ಮೆ ಅಧಿಕಾರ ಕೊಟ್ರೆ ಹಿಟ್ಲರ್ ಆಗ್ತಾರೆ : ಸಚಿವ ಎಸ್​.ಆರ್​. ಶ್ರೀನಿವಾಸ್

ತುಮಕೂರು:

   ಚುನಾವಣೆ ಸಂದರ್ಭದಲ್ಲಿ ಐಟಿ ದಾಳಿ ಮಾಡಿಸಿ ವಿರೋಧ ಪಕ್ಷದವರ ಆತ್ಮಸ್ಥೈರ್ಯ ಕುಗ್ಗಿಸುವುದನ್ನು ಪ್ರಧಾನಿ ನರೇಂದ್ರ ಮೋದಿ ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ ಎಂದು ಸಚಿವ ಎಸ್​.ಆರ್​. ಶ್ರೀನಿವಾಸ್​ ಆರೋಪಿಸಿದ್ದಾರೆ.

  ಐಟಿ ದಾಳಿ ಪ್ರಕರಣಕ್ಕೆ ತುಮಕೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಎಸ್​.ಆರ್​. ಶ್ರೀನಿವಾಸ್, ನನ್ನ ಮನೆ ಮೇಲೂ ಐಟಿ ದಾಳಿ ಮಾಡಲಿ. ನನ್ನ ಬಳಿ ಕಪ್ಪುಹಣ ಇಲ್ಲ. ಹಾಗಾಗಿ ನನಗೇನೂ ಭಯವಿಲ್ಲ. ಯಾರು ವಿರೋಧ ಪಕ್ಷದಲ್ಲಿದ್ದಾರೋ ಅವರನ್ನೇ ಮೋದಿ ಟಾರ್ಗೆಟ್ ಮಾಡುತ್ತಾರೆ, ಅವರಿಗೆ ಜನ ಬುದ್ದಿ ಕಲಿಸುತ್ತಾರೆ. ನಮ್ಮ ಪಕ್ಷದ ಮುಖಂಡರ ಮೇಲೆ ದಾಳಿ ಮಾಡುತ್ತಿದ್ದಾರೆ . ಇನ್ನೂ ಏನೇನು ಮಾಡುತ್ತಾರೋ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ.

  ನನ್ನ ಕಚೇರಿ ಮೇಲೆ ಐಟಿ ಮಾಡಲಿ . ನಂದೆಲ್ಲ ತೆರೆದ ಪುಸ್ತಕ ಇದ್ದಂತೆ. ಯಾವಾಗ ಬೇಕಾದರೂ ಬಂದು ಪರಿಶೀಲನೆ ಮಾಡಬಹುದು. ಚುನಾಣೆ ವೇಳೆಯಲ್ಲಿ ಐಟಿ ಇಲಾಖೆಯನ್ನು ಬಳಸಿಕೊಳ್ತಾರೆ ಅಂದ್ರೆ ಅವರಿಗೆ ಮಾನ-ಮರ್ಯಾದೆ ಇದೆಯಾ?  ಜನ ಮತ್ತೊಮ್ಮೆ ಅಧಿಕಾರ ಕೊಟ್ರೆ ಇವರು ಹಿಟ್ಲರ್ ಆಗ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಹಿಟ್ಲರ್ ಸಂಸ್ಕೃತಿ ಬರುತ್ತೆ ಎಂದು ಟೀಕಿಸಿದ್ದಾರೆ.

   ನಾವು  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇವೆ. ಆದರೆ, ಮೋದಿ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆ. ಹಾಗಾದ್ರೆ ಬಿಜೆಪಿಯವರು ಯಾರೂ ಅವ್ಯವಹಾರ ಮಾಡುತ್ತಿಲ್ವ? ಬಿಎಸ್ ಯಡಿಯೂರಪ್ಪ ಚೆಕ್ ಮೂಲಕ ಲಂಚ ತಗೊಂಡು ಲೂಟಿ ಮಾಡಿದರು. ಮೋದಿ ಹೆಲಿಕಾಪ್ಟರ್ ಖರೀದಿ ಮಾಡೋದ್ರಲ್ಲಿ ಲೂಟಿ ಮಾಡಿದರು.  ಅವರನ್ನೆಲ್ಲ ಬಿಟ್ಟು ನಮ್ಮ ಮೇಲೆ ಸವಾರಿ ಮಾಡುತ್ತಿದ್ದಾರೆ ಎಂದಿದ್ದಾರೆ.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ