ಬೆಂಗಳೂರು: ಹೊಸ ವರ್ಷಕ್ಕೆ BMTCಯಿಂದ ಗಿಫ್ಟ್​..!

ಬೆಂಗಳೂರು:    

     ರಾತ್ರಿ 10 ಗಂಟೆ ಆದರೆ ಸಾಕು ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​ಗಳೇ ಸಿಗಲ್ಲ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಂತೂ ದುಬಾರಿ ಬೆಲೆ ತೆತ್ತು ಆಟೋನೋ ಕ್ಯಾಬ್​ನಲ್ಲೂ ಮನೆಗೆ ಬರಬೇಕಾದ ಪರಿಸ್ಥಿತಿ ಸೃಷ್ಟಿಯಾಗಿತ್ತು. ಇದಕ್ಕೆ   ನಗರದಲ್ಲಿ ಮಿಡ್ ನೈಟ್ ಬಸ್ ಸಂಚಾರಕ್ಕೆ ಬಿಎಂಟಿಸಿ ಒಪ್ಪಿಗೆ ನೀಡಿದ್ದು . ಹೊಸ ವರ್ಷದಿಂದ ಮಧ್ಯರಾತ್ರಿ ದಾಟಿದ ನಂತರವೂ ಬಸ್ಸುಗಳನ್ನು ಓಡಿಸಲು ಒಪ್ಪಿಕೊಂಡಿದೆ.

    ನಮ್ಮ ಮೆಟ್ರೊ 12ವರೆಗೆ ವಿಸ್ತರಣೆ ಮಾಡಿದ ಬೆನ್ನಲ್ಲೇ BMTC ಬಸ್ ಸೇವೆಯನ್ನು ಕೂಡ ವಿಸ್ತರಣೆ ಮಾಡಲಾಗಿದೆ. ನಗರದಲ್ಲಿ ಕೆಲಸ ಮಾಡುವ ಉದ್ಯೋಗಿಗಳು ರಾತ್ರಿ ಕ್ಯಾಬ್ ಸೌಲಭ್ಯ ಪಡೆಯುತ್ತಾರೆ. ಇಲ್ಲದಿದ್ದರೆ ಸ್ವಂತ ವಾಹನ ಅಥವಾ ಆಟೋರಿಕ್ಷಾ ಬಳಸಬೇಕಾಗುತ್ತದೆ. ಇದೀಗ ಮೆಟ್ರೊ, ಬಿಎಂಟಿಸಿ ಸೇವೆ ವಿಸ್ತರಿಸಿರೋದ್ರಿಂದ ಜನ ನೆಮ್ಮದಿಯಿಂದ ಮನೆ ತಲುಪಬಹುದಾಗಿದೆ 

    ರಾತ್ರಿ 11.30ವರೆಗೆ ಬಸ್ ಸಂಚಾರ ಜಾರಿಯಲ್ಲಿರುತ್ತೆ ಎಂದು ಬಿಎಂಟಿಸಿ ಹೇಳಿದ್ರೂ ಜನದಟ್ಟಣೆ ಇಲ್ಲದ ಭಾಗದಲ್ಲಿ ರಾತ್ರಿ 10 ಗಂಟೆಗೆ ಸಂಚಾರವನ್ನು ನಿಲ್ಲಿಸಿಬಿಟ್ಟಿತ್ತು. ಇದರಿಂದ ರಾತ್ರಿ ಪ್ರಯಾಣ ಮಾಡುವ ಅದೆಷ್ಟೊ ಪ್ರಯಾಣಿಕರಿಗೆ ತೋಂದರೆ ಅನುಭವಿಸಿದ್ದರು. ಕೊನೆಗೂ ಪ್ರಯಾಣಿಕ ಹಿತದೃಷ್ಟಿಯಿಂದ ಎಚ್ಚೆತ್ತ BMTC ಮಧ್ಯರಾತ್ರಿವರಿಗೂ ಬಸ್​ಸಂಚಾರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ.

 

                ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap