ಅಮೃತಸರ :
ಕೊರೋನಾ ವೈರಸ್ನಿಂದಾಗಿ ಪಂಜಾಬ್ನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಿಖ್ ಗಾಯಕ ನಿರ್ಮಲ್ ಸಿಂಗ್ ಸಾವನ್ನಪ್ಪಿದ್ದಾರೆ. ಇವರು ಗೋಲ್ಡನ್ ಟೆಂಪಲ್ನಲ್ಲಿ ಹಜೂರಿ ರಾಗಿ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು.
ಪಂಜಾಬ್ನ ಆರೋಗ್ಯ ಇಲಾಖೆ ಖಚಿತಪಡಿಸಿದೆ. 62 ವರ್ಷದ ಗಾಯಕ ನಿರ್ಮಲ್ ಸಿಂಗ್ ಅವರಿಗೆ ಕೊರೋನಾ ಸೋಂಕು ತಗುಲಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ನಲ್ಲಿದ್ದ ಅವರು ಇಂದು ಮುಂಜಾನೆ 4.30ಕ್ಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
Giani Nirmal Singh, former Hazoori Ragi of Golden Temple, Amritsar has passed away at around 4:30 AM today. Nirmal Singh had tested positive for #coronavirus on Wednesday: KBS Sidhu, Special Chief Secretary, Punjab Disaster Management (COVID-19)
— ANI (@ANI) April 2, 2020
ಇವರು ಕೆಲವು ದಿನಗಳ ಹಿಂದೆ ವಿದೇಶದಿಂದ ಭಾರತಕ್ಕೆ ವಾಪಾಸಾಗಿದ್ದ ನಿರ್ಮಲ್ ಸಿಂಗ್ ಅವರಿಗೆ ಮಾರ್ಚ್ 30ರಂದು ಉಸಿರಾಟದ ತೊಂದರೆ ಶುರುವಾಗಿತ್ತು. ತಕ್ಷಣ ಅವರನ್ನು ಕೊರೋನಾ ತಪಾಸಣೆಗೆ ಒಳಪಡಿಸಿದಾಗ ಸೋಂಕು ತಗುಲಿರುವುದು ಖಚಿತವಾಗಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ಬಳಿಕ ನಿರ್ಮಲ್ ಸಿಂಗ್ ವಾಸಿಸುತ್ತಿದ್ದ ಪ್ರದೇಶವನ್ನು ಪೊಲೀಸರು ಸಂಪೂರ್ಣವಾಗಿ ಬಂದ್ ಮಾಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/04/Nirmal-Singh-Khalsa.jpg)