ಮದುವೆಯಾಗದ್ದಕ್ಕೆ ಪ್ರಿಯಕರನ ಮರ್ಮಾಂಗ ಕತ್ತರಿಸಿದ ಪ್ರೇಯಸಿ

ಬೆಂಗಳೂರು: 

 ಪ್ರೇಯಸಿಯೊಬ್ಬಳು ಪ್ರಿಯಕರನ ಮರ್ಮಾಂಗ ಕತ್ತರಿಸಿ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಅನುಭವಿಸುತ್ತಿರುವ ಘಟನೆ ಈಗ ಬೆಳಕಿಗೆ ಬಂದಿದೆ.

 2008ರಲ್ಲಿ ಬೆಂಗಳೂರಿನ ಕೋರಮಂಲದಲ್ಲಿ ಈ ಘಟನೆ ನಡೆದಿತ್ತು. ದಂತ ವೈದ್ಯರಾಗಿದ್ದ ಸೈಯಾದ್ ಅಮಿನಾ ಮತ್ತು ಮೀರ್ ಅರ್ಷದ್ ಕೋರಮಂಗಲದಲ್ಲಿ ಕ್ಲಿನಿಕ್ ನಡೆಸುತ್ತಿದ್ದರು. ಜೊತೆಯಲ್ಲಿ ಇದ್ದ ಇಬ್ಬರು ಕೂಡ ಪ್ರೀತಿ ಮಾಡುತ್ತಿದ್ದರು. ಈ ನಡುವೆ ಹುಡುಗನ ಮನೆಯವರು ಮದುವೆಗೆ ನಿರಾಕರಿಸಿದರು. ಮೀರ್ ಅರ್ಷದ್ ಕ್ಯಾನ್ಸರ್ ಇದೆ ಎಂದು ಅಮಿನಾಗೆ  ಸುಳ್ಳು ಹೇಳಿ ನಂಬಿಸಿ ಮದುವೆ ಆಗಲು ನಿರಾಕರಿಸಿದ್ದನು. ಬಳಿಕ ಮೀರ್ ಅರ್ಷದ್ ಬೇರೊಂದು ಮದುವೆಯಾಗಿದ್ದನು.

   ಪ್ರಿಯಕರನ ಮದುವೆಯಿಂದ ಬೇಸತ್ತು  ಕೋಪಗೊಂಡ ಪ್ರೇಯಸಿ ಆತನನ್ನು ಮತ್ತು ಆತನ ಪತ್ನಿಯನ್ನು ಔತಣಕ್ಕೆ ಕರೆದಿದ್ದಳು. ಮನೆಯಲ್ಲಿ ಊಟಕ್ಕೆ ಮತ್ತಿನ ಔಷಧಿ ಹಾಕಿ ಪ್ರಿಯಕರನ ಮರ್ಮಾಂಗ ಕತ್ತರಿಸಿದ್ದಳು. ಬಳಿಕ ಆಕೆಯೇ ಪ್ರಿಯಕರನ ಆಸ್ಪತ್ರೆಗೆ ಸೇರಿಸಿ ಪರಾರಿಯಾಗಿದ್ದಳು.

ಇಷ್ಟೇಲ್ಲಾ ಘಟನೆ ಬಳಿಕ ಪೊಲೀಸರು ಪ್ರಿಯತಮೆಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಬೆಂಗಳೂರಿನ ಸಿಟಿ ಸಿವಿಲ್ ಕೋಟ್ ನಲ್ಲಿ ವಾದ ಪ್ರತಿವಾದ ಆಲಿಸಿ ಯುವತಿಗೆ 10 ವರ್ಷ ಶಿಕ್ಷೆ ಪ್ರಕಟಿಸಿದೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap