ಬೆಂಗಳೂರು: ಒಂದೇ ದಿನದಲ್ಲಿ 973 ವಾಹನಗಳು ಜಪ್ತಿ..!

ಬೆಂಗಳೂರು: 

  ನಿನ್ನೆ  ಬೆಂಗಳೂರುನಲ್ಲಿ ಅನಗತ್ಯವಾಗಿ ಹೋರಗೆ ಬಂದ 973 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಲಾಕ್​​​​​​ಡೌನ್ ಹೇರಿದ ಬಳಿಕ ಅತೀ ಹೆಚ್ಚು ವಾಹನಗಳನ್ನು ನಿನ್ನೆ ಜಪ್ತಿ ಮಾಡಲಾಗಿದೆ.

  ಅನಗತ್ಯವಾಗಿ ಪಾಸ್ ಇಲ್ಲದೇ ಓಡಾಡಿದ ವಾಹನಗಳನ್ನು ವಶಕ್ಕೆ ಪಡೆದು ಪೊಲೀಸರು, (NDMA) ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

  ಬೆಂಗಳೂರಿನಾದ್ಯಂತ ಈವರೆಗೆ 46,673 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸದ್ಯ ವಶಪಡಿಸಿಕೊಂಡ ವಾಹನಗಳನ್ನು ಆಯಾ ವ್ಯಾಪ್ತಿಯ ಪೊಲೀಸ್​ ಠಾಣೆ ಹಾಗೂ ಸ್ಥಳೀಯ ಮೈದಾನಗಳಲ್ಲಿ ನಿಲ್ಲಿಸಲಾಗಿದೆ. ಲಾಕೌಡೌನ್ ಮುಗಿದ ನಂತರ ಜಪ್ತಿ ಮಾಡಿದ ವಾಹನಗನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಲಯದ ಆದೇಶದ ಮೇರೆಗೆ ವಾಹನ ಸವಾರರು ಸರಿಯಾದ ದಾಖಲೆಗಳನ್ನು ನೀಡಿದ್ರೆ ಮಾತ್ರ ವಾಹನ ಸವಾರರ ಕೈಗೆ ವಾಹನಗಳು ಸಿಗಲಿವೆ. ಇಲ್ಲದಿದ್ದರೆ ಹರಾಜಿನಲ್ಲಿ ಮಾರಾಟವಾಗುತ್ತದೆ ಎಂದು ತಿಳಿಸಿದ್ದಾರೆ .

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link