ಬಂದರು ವಿಸ್ತರಣೆ ವಿರೋಧಿಸಿ ಮೀನುಗಾರರ ಹೋರಾಟ; ಇಂದು ಕಾರವಾರ ಬಂದ್

ಕಾರವಾರ:

    ಕಾರವಾರ ವಾಣಿಜ್ಯ ಬಂದರು ವಿಸ್ತರಣೆಗೆ ಮೀನುಗಾರರು ಮತ್ತಷ್ಟು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟು ದಿನ ರವೀಂದ್ರನಾಥ ಕಡಲತೀರಕ್ಕೆ ಮತ್ತು ಮೀನುಗಾರಿಕೆಗೆ ಹಾನಿಯಾಗಲ್ಲ ಎಂದು ಹೋರಾಟದ ದಿಕ್ಕುತಪ್ಪಿಸುತ್ತಿದ್ದ ಬಂದರು ಇಲಾಖೆ, ಕೊನೆಗೂ ನಿನ್ನೆ ಕಡಲತೀರದ ಮಧ್ಯೆಯೇ ಕಲ್ಲು ಹಾಕಿ ಕಾಮಗಾರಿ ಆರಂಭ ಮಾಡಿದೆ.

   ಜಿಲ್ಲೆಯ ವಾಣಿಜ್ಯ ಬಂದರು ವಿಸ್ತರಣೆಗೆ ಸ್ಥಳೀಯ ಮೀನುಗಾರರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಈ ಹಿನ್ನಲೆಯಲ್ಲಿ ಬಂದ್ ಗೆ ಕರೆ ನೀಡಲಾಗಿದೆ. ಮೀನುಗಾರರ ಹೋರಾಟಕ್ಕೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ.

    ಬಂದರು ಇಲಾಖೆಯ ಈ ಧೋರಣೆಯನ್ನು ಖಂಡಿಸಿ ಮೀನುಗಾರರ ಹೋರಾಟ ಇನ್ನಷ್ಟು ಬಲಗೊಳ್ಳುತ್ತಿದೆ.  ಕಾರವಾರದ ಮೀನುಗಾರರು ಕಡಲತೀರ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಹಾಗಾಗಿ ಇಂದು ಕಾರವಾರ ಬಂದ್ ಮಾಡಿದ್ದು ಹೋರಾಟದ ಕಿಚ್ಚು ಇನ್ನಷ್ಟು ಬಲವಾಗಲಿದೆ.

     ಇಂದು ಕಾರವಾರ ಸಂಪೂರ್ಣ ಬಂದ್ ಆಗಿದ್ದು, ಮೀನುಗಾರರಿಗೆ ಹಲವು ಸಂಘಟನೆಗಳ ಬೆಂಬಲ ನೀಡಿದ್ದಾರೆ. ಕಾರವಾರ ವಾಣಿಜ್ಯ ಬಂದರು ವಿಸ್ತರಣೆ ಮಾಡುವ ಸಾಗರಮಾಲ ಯೋಜನೆ ವಿರೋಧಿಸಿ ಮೀನುಗಾರರು ಕಾರವಾರ ಬಂದ್​ಗೆ ಕರೆ ಕೊಟ್ಟಿದ್ದಾರೆ. ಕಡಲತೀರ ಉಳಿಸಿಕೊಳ್ಳಲು ಮೀನುಗಾರರು ಹೋರಾಟ ನಡೆಸುತ್ತಿದ್ದಾರೆ. ವಾಹನ ಸಂಚಾರ ಸ್ಥಗಿತವಾಗಿದ್ದು, ಪ್ರಯಾಣಿಕರ ಪರದಾಡುತ್ತಿದ್ದಾರೆ. ಶಾಲಾ-ಕಾಲೇಜಿಗೆ ಅಧಿಕೃತ ರಜೆ ಘೋಷಣೆ ಇಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 6 ಕೆಎಸ್​ಆರ್​​ಪಿ, 8 ಡಿಎಆರ್​​, ಡಿವೈಎಸ್​ಪಿ ಸೇರಿ 550ಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link