ಮಾಸ್ಕೋ:
ರಷ್ಯಾ 2025ರ ವೇಳೆಗೆ 5 ಎಸ್ – 400 ವಾಯು ರಕ್ಷಣಾ ವ್ಯವಸ್ಥೆಯನ್ನು ಭಾರತಕ್ಕೆ ತಲುಪಿಸಲಿದೆ ಎಂದು ಮಾಸ್ಕೋ ರಾಜತಾಂತ್ರಿಕ ರೋಮನ್ ಬಾಬುಷ್ಕಿನ್ ಶುಕ್ರವಾರ ಹೇಳಿದ್ದಾರೆ. ಕ್ಷಿಪಣಿಗಳು ಭಾರತದ ಭದ್ರತೆಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳಿದರು.
“ಇಂಡಿಯಾ ಮತ್ತು ರಷ್ಯಾ ಎರಡೂ ಕಡೆಯಿಂದ ನಮ್ಮ ರಕ್ಷಣಾ ಒಪ್ಪಂದದ ಸಮಯೋಚಿತ ಅನುಷ್ಠಾನಕ್ಕೆ ಬದ್ಧವಾಗಿವೆ. ಆದ್ದರಿಂದ ನಾವು ನಮ್ಮ ಪಾವತಿ ಸಮಸ್ಯೆಯನ್ನು ಬಗೆಹರಿಸಿದ್ದೇವೆ ಮತ್ತು ಎಲ್ಲಾ ಒಪ್ಪಂದದ ಅನುಷ್ಠಾನವು ನಿಗದಿಯಂತೆ ನಡೆಯುತ್ತಿದೆ” ಎಂದು ಭಾರತದ ರಷ್ಯಾ ರಾಯಭಾರಿ ಬಾಬುಷ್ಕಿನ್ ಹೇಳಿದ್ದಾರೆ.
“ನಾವು 2025 ರ ವೇಳೆಗೆ ಐದು ಎಸ್ – 400 ಕ್ಷಿಪಣಿಗಳ ರಕ್ಷಣಾ ವ್ಯವಸ್ಥೆಯನ್ನು ಭಾರತಕ್ಕೆ ನೀಡುತ್ತೇವೆ. ರಷ್ಯಾ ವಿಶ್ವದ ಅತ್ಯುತ್ತಮ ರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ ಮತ್ತು ಇದು ಭಾರತದ ಭದ್ರತೆ ಮತ್ತಷ್ಟು ಬಲ ನೀಡಲಿದೆ” ಎಂದು ಅವರು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ