ಕಾರಿನ ಹೀಟರ್ ಸ್ಪೋಟಗೊಂಡು ಮಹಿಳೆ ಸಜೀವ ದಹನ

ಬೀದರ್: 

  ಅತಿಯಾದ  ಚಳಿಯಂಬ ಕಾರಣಕ್ಕೆ ಕಾರನಲ್ಲಿದ್ದ ಹೀಟರ್ ಆನ್ ಮಾಡಿದ್ದಾರೆ. ಆದರೆ ಅತಿ ಬಿಸಿ ಮಾಡಿ ಕಾರು ಚಲಾಯಿಸಿದ್ದರಿಂದ  ಬೆಂಕಿ ಕಾಣಿಸಿಕೊಂಡಿದೆ ಹೀಟರ್ ಸ್ಪೋಟಗೊಂಡಿದೆ. ಪರಿಣಾಮ ಮಹಿಳೆಯೊಬ್ಬಳು ಸಜೀವ ದಹನವಾಗಿದ್ದಾರೆ. ಜಿಲ್ಲೆಯ ಹುಮನಾಬಾದ್ ತಾಲೂಕಿನ ನಿರ್ಣಾ ಕ್ರಾಸ್ ಬಳಿ ಈ ಘಟನೆ ನಡೆದಿದೆ.

  ಮೃತ ಮಹಿಳೆಯನ್ನು ಕಲ್ಯಾಣಿ ಎಂದು ತಿಳಿದುಬಂದಿದೆ, ‌ಒಟ್ಟು ನಾಲ್ಕು ಜನ ಪ್ರಯಾಣಿಸಿದ್ದು ಆದರಲ್ಲಿ ಚಾಲಕ ಸೇರಿದಂತೆ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

  ಈ ಕುಟುಂಬ ಮಹಾರಾಷ್ಟ್ರದ ಉದಗಿರನಿಂದ ತೆಲಂಗಣದ ಹೈದ್ರಾಬಾದ್​ಗೆ ತೆರಳುತ್ತಿತ್ತು. ನಸುಕಿನ ಜಾವದಲ್ಲಿ ಅತಿಯಾದ ಚಳಿಯಾದ ಹಿನ್ನೆಲೆಯಲ್ಲಿ ಹೀಟರ್ ಹಾಕಿ ಕಾರು ಚಲಾಯಿಸಿದ್ದಾರೆ. ಹೀಗಾಗಿ ಈ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ. ಸ್ಥಳಕ್ಕೆ ಮನ್ನಾಖೇಳ್ಳಿ ಪೊಲೀಸರು ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link