ಬೆಂಗಳೂರು:
ಕಿಡ್ನಿ ಆಪರೇಷನ್ ಮತ್ತು ದಾನದ ಹೆಸರಲ್ಲಿ ಕೋಟ್ಯಂತರ ರೂಪಾಯಿಗಳನ್ನ ಅಮಾಯಕರಿಗೆ ಅಕ್ರಮ ವಲಸಿಗರು ಪಂಗನಾಮ ಹಾಕಿದ್ದಾರೆ.
ಕೇವಲ ವೆಬ್ಸೈಟ್ಗಳಲ್ಲಿ ಆಕರ್ಷಕ ಜಾಹೀರಾತು ನೀಡಿ ಕಿಡ್ನಿ ಆಪರೇಷನ್ ಮಾಡಲಾಗುತ್ತದೆ ಹಾಗೂ ಕಿಡ್ನಿ ದಾನ ಮಾಡಿದವರಿಗೆ ಅಪಾರ ಹಣ ನೀಡಲಾಗುತ್ತದೆ ಎಂದು ಭರವಸೆ ನೀಡಿ ಕೋಟಿಗಟ್ಟಲೇ ಹಣವನ್ನು ದೋಚಿದ್ದ ವಿದೇಶದ ‘ ನೈಜೀರಿಯಾ ‘ ಪ್ರಜೆಗಳಿರುವ ಗ್ಯಾಂಗ್ನ್ನು ಸಿಲಿಕಾನ್ ಸಿಟಿ ಪೊಲೀಸರು ಸೆರೆ ಹಿಡಿದು ಇವರ ದಂಧೆಯನ್ನು ಬಯಲು ಮಾಡಿದ್ದಾರೆ.
ರಾಜಧಾನಿಯ ಪ್ರತಿಷ್ಠಿತ ಆಸ್ಪತ್ರೆಯ ಸೋಗಿನಲ್ಲಿ ನಕಲಿ ವೆಬ್ಸೈಟ್ ಹಾಗೂ ಇ-ಮೇಲ್ ಸೃಷ್ಟಿಸಿಕೊಂಡು ಕಿಡ್ನಿ ಮಾರಾಟ ಹಾಗೂ ಖರೀದಿಸುವ ಜಾಹೀರಾತು ನೀಡಿ ಅಮಾಯಕರಿಂದ ಸಹಸ್ರಾರು ಕೋಟಿ ರೂ. ಟೋಪಿ ಹಾಕಿದ್ದ ಮೂವರು ನೈಜೀರಿಯಾ ಪ್ರಜೆಗಳು ಸೇರಿದಂತೆ ಒಟ್ಟು ಆರು ಮಂದಿ ದಂಧೆಕೋರರನ್ನು ಸೆರೆಹಿಡಿಯುವಲ್ಲಿ ಬಾಣಸವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ನೈಜಿರಿಯಾದ ಎಸೆನ್ ಲವ್ಲಿ, ಮೊಹಮ್ಮದ್ ಅಹ್ಮದ್ ಇಸ್ಮಾಯಿಲ್, ಸೂಡಾನ್ ದೇಶದ ಮರ್ವಾನ್, ತ್ರಿಪುರಾ ರಾಜ್ಯದ ಹಿರೇಂದ್ರ, ಕೆಮಿ ರಂಜನ್ ಹಾಗೂ ಜತಿನ್ ಕುಮಾರ್ ಎಂಬುವರನ್ನು ಬಂಧಿಸಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ