ಒಂದೂವರೆ ಎಕರೆ ಕಬ್ಬು ನಾಶ ಮಾಡಿ ಸಿಎಂಗೆ ವಿಡಿಯೋ ಶೇರ್ ಮಾಡಿ ಎಂದ ರೈತ

ಹಾಸನ:
       ರೈತ ಕಷ್ಟಪಟ್ಟು ಬೆಳೆಯುವ ಬೆಳೆಗೆ ಸರಿಯಾದ ಬೆಲೆ ಸಿಗದಿದ್ದಾಗ ಆತ ಬೇಸತ್ತು ಆತ್ಮಹತ್ಯೆಯ ದಾರಿ ಹಿಡಿಯುತ್ತಾನೆ.  ಹಲವಾರು ರೈತ ಸಂಘಟನೆಗಳು ಈ ಮೊದಲಿನಿಂದಲೂ ಪ್ರತಿಭಟನೆ, ಹೋರಾಟಗಳನ್ನು ನಡೆಸುತ್ತಾ ಬಂದಿವೆ.  ಈ ನಡುವೆಯೇ ಹಾಸನದಲ್ಲಿ ಓರ್ವ ರೈತ ತಾನು ಬೆಳೆದ ಕಬ್ಬಿನ ಬೆಳೆಗೆ ಕಾರ್ಖಾನೆ ಸಿಗದೆ ಒಂದೂವರೆ ಎಕರೆ ಕಬ್ಬನ್ನು ನಾಶ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
    ಚನ್ನರಾಯಪಟ್ಟಣ ತಾಲೂಕಿನಲ್ಲಿ ಒಂದೇ ಒಂದು ಚಾಮುಂಡೇಶ್ವರಿ ಶುಗರ್ ಫ್ಯಾಕ್ಟರಿ ಇದೆ. ಆದರೆ ಅದು ಇನ್ನೂ ಸಹ ಕಾರ್ಯ ನಿರ್ವಹಿಸುತ್ತಿಲ್ಲ. ಪಕ್ಕದ ಕೆ.ಆರ್.ಪೇಟೆ ತಾಲೂಕಿನಲ್ಲಿರುವ ಶುಗರ್ ಫ್ಯಾಕ್ಟರಿ ಕಾರ್ಯನಿರ್ವಹಿಸುತ್ತಿದೆ. ಆದರೆ ಅಲ್ಲಿನ ಮ್ಯಾನೇಜರ್​ ನಮ್ಮ ತಾಲೂಕಿನ ರೈತರ ಕಬ್ಬನ್ನು ತೆಗೆದುಕೊಳ್ಳಲು ಸಿದ್ದವಿಲ್ಲ. ಕೆ.ಆರ್.ಪೇಟೆ ತಾಲೂಕಿನ ರೈತರ ಕಬ್ಬು ಹೆಚ್ಚಿನ ಪ್ರಮಾಣದಲ್ಲಿ ಫ್ಯಾಕ್ಟರಿಗೆ ಬರುವುದರಿಂದ ನಿಮ್ಮ ತಾಲೂಕಿನ ಕಬ್ಬನ್ನು ತೆಗೆದುಕೊಳ್ಳಲು ಆಗಲ್ಲ ಎಂದು ಹೇಳಿದ್ದಾರೆ-ರೈತನ ಮಾತು.

    ಕಬ್ಬನ್ನು ನಾಶ ಮಾಡುತ್ತಿರುವ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆಹಿಡಿದು ಫೇಸ್​ಬುಕ್​ನಲ್ಲಿ ಹರಿಯಬಿಟ್ಟಿದ್ದಾನೆ. ಜೊತೆಗೆ ಮುಖ್ಯಮಂತ್ರಿ ಬಿಎಸ್‌.ಯಡಿಯೂರಪ್ಪನವರಿಗೆ ತಲುಪವವರೆಗೂ ವಿಡಿಯೋ ಶೇರ್ ಮಾಡಿ ಎಂದು ಕೋರಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಹಿರಿಬಿಳ್ತಿ ಗ್ರಾಮ  ಎಂದು ಬೆಳಕಿಗೆ ಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

  

Recent Articles

spot_img

Related Stories

Share via
Copy link
Powered by Social Snap