ಮಿಣಿ ಮಿಣಿ ಪದ ಬಳಕೆಗೆ ನಿರ್ಬಂಧ ಹೇರುವಂತೆ; ಕೋರ್ಟ್ ಮೆಟ್ಟಿಲೇರಿದ ಹೆಚ್ ಡಿ ಕೆ

ಬೆಂಗಳೂರು :

   ಎಚ್.ಡಿ.ಕೆಕುಮಾರಸ್ವಾಮಿ ಬಳಸಿದ್ದ ಮಿಣಿಮಿಣಿ ಪೌಡರ್ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಆಗಿತ್ತು. ಇದರಿಂದಾಗಿ ಕುಮಾರಸ್ವಾಮಿ ತೀವ್ರ ಬೇಸರಗೊಂಡಿದ್ದು, ಪದ ಬಳಕೆ ನಿರ್ಬಂಧಿಸುವಂತೆ ಕೋರ್ಟ್ ಮೊರೆ ಹೋಗಿದ್ದಾರೆ.

  ತಮ್ಮ ಮಿಣಿ ಮಿಣಿ ಹೇಳಿಕೆಗೆ ವ್ಯಕ್ತವಾಗುತ್ತಿರುವ ವ್ಯಂಗ್ಯಕ್ಕೆ ಎಚ್.ಡಿ.ಕುಮಾರಸ್ವಾಮಿ ಸಿಡಿಮಿಡಿಗೊಂಡಿದ್ದು, ಈ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಮಿಣಿ‌ ಮಿಣಿ ಪೌಡರ್ ಉಲ್ಲೇಖಿಸದಂತೆ ಕುಮಾರಸ್ವಾಮಿ ಅವರು ಶನಿವಾರ ಬೆಂಗಳೂರಿನ ಸಿವಿಲ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಅವರನ್ನು ಅಪಹಾಸ್ಯ ಮಾಡಲು ಮಿಣಿ ಮಿಣಿ ಪೌಡರ್ ಪದಗಳನ್ನು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಳಕೆ ಮಾಡದಂತೆ ಮತ್ತು ಈಗಾಗಲೇ ಮಾನಹಾನಿ ಉಂಟು ಮಾಡಿರುವ ಚಿತ್ರ, ದೃಶ್ಯ ಹಾಗೂ ಬರಹಗಳನ್ನು ತೆರವುಗೊಳಿಸುವಂತೆ ಬೆಂಗಳೂರು ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆದೇಶ ಹೊರಡಿಸಿದೆ.

  ಈ ವಿಚಾರವಾಗಿ ಹೆಚ್‌ಡಿಕೆ ನಗರದ 20ನೇ ಸಿಸಿಹೆಚ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅಪಮಾನಕಾರಿ ಪ್ರಕಟಣೆಗಳ ವಿರುದ್ಧ ತಡೆ ನೀಡುವಂತೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿರುವ ಪೋಸ್ಟ್​ಗಳನ್ನು ತೆಗೆದು ಹಾಕಲು ಆದೇಶಿಸುವಂತೆ ಮನವಿ ಮಾಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link