ಪೊಲೀಸ್​​​ ಕ್ವಾರ್ಟರ್ಸ್​​ನೊಳಗೆ ನಡೆದ ಭೀಕರ ಅತ್ಯಾಚಾರ

ಭುವನೇಶ್ವರ್​:

  ಒಡಿಶಾದ ಪುರಿ ಪೊಲೀಸ್​ ವಸತಿ ಗೃಹದ ಸಮೀಪದಲ್ಲೇ ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ.  ಇಲ್ಲಿನ ನಿಮಾಪಾರ ಬಸ್​ ಟರ್ಮಿನಲ್​​ನಿಂದ ಬಾಲಕಿಯನ್ನು ಅಪಹರಿಸಿದ ದುರುಳರ ಗುಂಪು, ಪೊಲೀಸ್​ ವಸತಿ ಗೃಹಗಳ ಪಕ್ಕದಲ್ಲೇ ಇರುವ ಝಡೇಶ್ವರಿ ಕ್ಲಬ್​​​​​​ನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

   ಅತ್ಯಾಚಾರಕ್ಕೆ ಒಳಗಾದ ಬಾಲಕಿ ಹೇಳಿಕೆ ನೀಡಿದ್ದು, ತಾನು ಕಾಕಟಪುರ ತೆರಳಲು ಬಸ್​ಗಾಗಿ ಕಾಯುತ್ತಿದೆ. ಬಸ್​ ಮಿಸ್​ ಆಗಿದ್ದರಿಂದ ಬಸ್​​  ಟರ್ಮಿನಲ್​​​​ನಲ್ಲಿ ಕಾಯುತ್ತಿದ್ದೆ, ಆಗ ವ್ಯಕ್ತಿಯೊಬ್ಬ ತಾನು ಪೊಲೀಸ್​ ಎಂದು ಹೇಳಿಕೂಂಡು ಸಹಾಯ ಮಾಡುವುದಾಗಿ ಹೇಳಿದ.

   ಬಳಿಕ ನಾಲ್ವರು ವ್ಯಕ್ತಿಗಳು ಕ್ಲಬ್​ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸೆಗಿದ್ದಾರೆ ಎಂದಿದ್ದಾಳೆ. ಬಾಲಕಿ ಹೇಳಿಕೆ ದಾಖಲಿಸಿಕೊಂಡಿದ್ದು, ತನಿಕೆ ನಡೆಸಲಾಗುತ್ತಿದೆ ಎಂದು ಎಸ್​​ಪಿ ಉಮಾಶಂಕರ್​ ದಾಸ್​ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಕುಂಭ್ರಪಡ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಜಿತೇಂದ್ರ ಸೇಠಿ ಎಂಬುವವನ್ನು ವಶಕ್ಕೆ ಪಡೆದಿದ್ದಾರೆ. ಈ ನಡುವೆ ಅತ್ಯಾಚಾರ ನಡೆದ ಜಾಗದಲ್ಲಿ ವ್ಯಾಲೆಟ್​​ ದೊರೆತಿದ್ದರಿಂದ ಒಬ್ಬ ಪೊಲೀಸ್​​ನನ್ನು ಅಮಾನತು ಮಾಡಲಾಗಿದೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap