ಉಡುಪಿ:
ಪ್ರವಾಸಿ ಬಸ್ ಒಂದು ಕಾರ್ಕಳದ ಬಳಿ ಅಪಘಾತಕ್ಕೆ ತುತ್ತಾಗಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ. ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.
ಕಾರ್ಕಳ ತಾಲೂಕಿನ ಮಾಳ ಬಳಿ ಅಪಘಾತ ಸಂಭವಿಸಿದ್ದು, ಅಪಘಾತಕ್ಕೆ ತುತ್ತಾಗಿರುವ ಬಸ್ಸು ಮೈಸೂರು ಜಿಲ್ಲೆಯ ಪ್ರವಾಸಿ ಬಸ್ಸಾಗಿತ್ತು ಎನ್ನಲಾಗಿದೆ. ಬಸ್ಸಿನಲ್ಲಿ 35 ಮಂದಿ ಪ್ರವಾಸಿಗರು ಪ್ರಯಾಣಿಸುತ್ತಿದ್ದರು.
ಬಸ್ಸು ಪ್ರವಾಸಿಗರನ್ನು ಹೊತ್ತು ಮೈಸೂರಿನಿಂದ ಮಂಗಳೂರಿಗೆ ತೆರಳುವಾಗ ದುರ್ಘಟನೆ ಸಂಭವಿಸಿದೆ. ಒಂದು ಬಾರಿ ನಿಯಂತ್ರಣ ತಪ್ಪಿ ವಾಲಿತ್ತು. ಮತ್ತೆ ಬಸ್‌ನ ಚಾಲನೆ ಮಾಡಿದಾಗ ಎದುರಿನಿಂದ ಬಂದ ಲಾರಿಯೊಂದನ್ನು ತಪ್ಪಿಸಲು ಹೋದಾಗ ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಅರ್ಧ ಭಾಗ ಬಂಡೆಗೆ ಉಜ್ಜಿಕೊಂಡು ಹೋಗಿ ಡಿಕ್ಕಿ ಹೊಡೆದ ಪರಿಣಾಮ ಈ ಪ್ರಮಾಣದಲ್ಲಿ ಜೀವ ಹಾನಿಯಾಗಿದೆ ಎನ್ನಲಾಗಿದೆ. ಘಟನೆಗೆ ನಿಜವಾದ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ.ರಸ್ತೆಯ ಪಕ್ಕದ ಬಂಡೆಗೆ ಬಸ್ಸು ಢಿಕ್ಕಿ ಹೊಡೆದ ಪರಣಾಮ ಅಪಘಾತ ಸಂಭವಿಸಿದೆ.
ಎಸ್ ಕೆ ಬಾರ್ಡರ್ ಸಮೀಪದ ಅಬ್ಬಾಸ್ ಕಟ್ಟಿಂಗ್ ಬಳಿ ಢಿಕ್ಕಿ ಸಂಭವಿಸಿದ್ದು, 9 ಮಂದಿ ಪ್ರಯಾಣಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹಲವು ಮಂದಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ವ್ಯಕ್ತಪಡಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ