ಲಾರಿ ಮತ್ತು ಟಿಪ್ಪರ್‌ ನಡುವೆ ಭೀಕರ ಅಪಘಾತ: ಚಾಲಕ ಸಜೀವ ದಹನ

ಧಾರವಾಡ:

      ಲಾರಿ ಹಾಗೂ ಟಿಪ್ಪರ್‌ ನಡುವೆ  ಭೀಕರ ಅಪಘಾತದಿಂದ ಎರಡು ವಾಹನಗಳು ಹೊತ್ತಿ ಉರಿದು, ಚಾಲಕ ಸಜೀವವಾಗಿ ದಹನವಾದ ಘಟನೆ ಜಿಲ್ಲೆಯ ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಇಂದು ಶನಿವಾರ ನಡದಿದೆ.

      ಘಟನೆಯಿಂದ ಹುಬ್ಬಳ್ಳಿ ಕಾರವಾರ ರಾಷ್ಟ್ರೀಯ ಹೆದ್ದಾರಿ ಸಂಚಾರ ಎರಡು ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡಿತು. ಲಾರಿ ಮತ್ತು ಟಿಪ್ಪರ್ ಮುಖಾಮುಖಿ ಡಿಕ್ಕಿಯಾಗಿದ್ದರಿಂದ ಡೀಸೆಲ್ ಟ್ಯಾಂಕ್‌ ಸ್ಫೋಟಗೊಂಡ ಬೆಂಕಿಹೊತ್ತಿಕೊಂಡಿದ್ದು, ಟಿಪ್ಪರ್‌ನಲ್ಲಿದ್ದ ಚಾಲಕ ವಾಹನದಲ್ಲೇ ಸಜೀವ ದಹನವಾಗಿದ್ದಾನೆ.

    ಲಾರಿ ಚಾಲಕ ಮತ್ತು‌ ಕ್ಲೀನರ್ ಅಪಘಾತ ಸಂಭವಿಸುತ್ತಿದ್ದಂತೆ ಇಳಿದು ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನ ನಂದಿಸಿದ್ದಾರೆ. ಈ ಸಂಬಂಧ ಕಲಘಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap