ಯಾದಗಿರಿ:
ಜವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಜನರು ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಬೆಂಚಿಗಡ್ಡಿ ಗ್ರಾಮದ ಸಮೀಪದ ಗವಿರಂಗ ಹನುಮಾನ್ ದೇವಸ್ಥಾನದಲ್ಲಿ ನಡೆದಿದೆ.
ಬೆಂಚಿಗಡ್ಡಿ ಗ್ರಾಮದಲ್ಲಿ ಜವಳ ಕಾರ್ಯಕ್ರಮನ್ನು ಗವಿರಂಗ ಹನುಮಾನ್ ದೇವಸ್ಥಾನ ಆವರಣದಲ್ಲಿ ನೆರವೇರಿಸಲಾಗಿತ್ತು. ದೇವಸ್ಥಾನದಲ್ಲಿ ಕಾರ್ತಿಕ ಮಹೋತ್ಸವ ಕಾರ್ಯಕ್ರಮ ಕೂಡ ಇದ್ದ ಹಿನ್ನೆಲೆ ಗವಿಯಪ್ಪನ ಕುಟುಂಬಸ್ಥರು ಜವಳ ಕಾರ್ಯಕ್ರಮ ನಿಗದಿ ಮಾಡಿದ್ದರು.
ಬೆಂಚಿಗಡ್ಡಿಯ ಗವಿಯಪ್ಪ ಮನೆಯಿಂದಲೇ ಹೋಳಿಗೆ, ಅನ್ನ, ಸಾಂಬಾರ್ ಅಡುಗೆ ಮಾಡಿಕೊಂಡು ಬಂದಿದ್ದರು. ಜವಳ ಕಾರ್ಯಕ್ರಮದ ನಂತರ ಗ್ರಾಮಸ್ಥರು, ಗವಿಯಪ್ಪನ ಸಂಬಂಧಿಕರು ಆಹಾರ ಸೇವಿಸಿ. ನಂತರ ಗ್ರಾಮಕ್ಕೆ ವಾಪಸ್ ತೆರಳುವಾಗ ವಾಂತಿ ಕಾಣಿಸಿಕೊಂಡು 50 ಜನ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾದವರಲ್ಲಿ 31 ಜನ ಸಮೀಪದ ಕಕ್ಕೇರಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ