ದೆಹಲಿ:
‘ದೇಶದ ಕೋಟ್ಯಂತರ ಬಡವರಿಗೆ ‘ಆಧಾರ್’ ಅಸ್ತಿತ್ವ ತಂದುಕೊಟ್ಟಿದೆ. ದತ್ತಾಂಶ ಸುರಕ್ಷೆ ಕಾನೂನನ್ನು ಶೀಘ್ರ ಜಾರಿ ಮಾಡಿ’ ಎಂದು ಸುಪ್ರೀಂಕೋರ್ಟ್ ಹೇಳಿದೆ .
ಆಧಾರ್ ಕಾರ್ಡ್ ಅನ್ನು ಎಲ್ಲಾ ಸರ್ಕಾರಿ ಯೋಜನೆಗಳಿಗೂ ಕಡ್ಡಾಯವಾಗಿ ಬಳಸಬೇಕು ಎಂದು ಸುಪ್ರೀಂ ಹೇಳಿದ್ದು, ಖಾಸಗೀ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಆಧಾರ್ ಕಡ್ಡಾಯವಲ್ಲ ಎಂದು ಅದು ಹೇಳಿದೆ.
ಯಾವುದಕ್ಕೆ ಕಡ್ಡಾಯ:
ಪ್ಯಾನ್ ನಂಬರ್ ಗೆ ಆಧಾರ್ ಜೋಡಣೆ ಕಡ್ಡಾಯ.
ಸರ್ಕಾರಿ ಸೌಲಭ್ಯಗಳಿಗೆ ಮಾತ್ರ ಕಡ್ಡಾಯ.
ಐಟಿ ರಿಟರ್ನ್ಸ್ ಸಲ್ಲಿಸಲು ಆಧಾರ್ ಕಡ್ಡಾಯ.
ಯಾವುದಕ್ಕೆ ಕಡ್ಡಾಯವಲ್ಲ:
ಬ್ಯಾಂಕ್ ಖಾತೆಗಳಿಗೆ ಆಧಾರ್ ಕಡ್ಡಾಯವಲ್ಲ.
ಪೇಟಿಯಂ, ಫೋನ್ ಪೇ, ಡಿಜಿಟಲ್ ಅಯಪ್ ಗಳಿಗೆ ಕಡ್ಡಾಯವಲ್ಲ.
ಮೊಬೈಲ್ ನಂಬರ್ ಗಳಿಗೆ ಆಧಾರ್ ಕಡ್ಡಾಯವಲ್ಲ.
ಹಣಕಾಸು ಉದ್ದೇಶಕ್ಕಾಗಿ ಆಧಾರ್ ಬಳಸುವಂತಿಲ್ಲ.
ಮೊಬೈಲ್ ಸಿಮ್ ಖರೀದಿಗೆ ಕಡ್ಡಾಯವಲ್ಲ.
ಖಾಸಗಿ ಶಾಲಾ, ಕಾಲೇಜು ಸೇರ್ಪಡೆಗೆ ಆಧಾರ್ ಕಡ್ಡಾಯವಲ್ಲ.
6 ತಿಂಗಳಿಗಿಂತ ಹೆಚ್ಚು ಕಾಲ ಆಧಾರ್ ಮಾಹಿತಿ ಸಂಗ್ರಹಿಸಿ ಇಟ್ಟುಕೊಳ್ಳುವಂತಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
