ತಮಿಳುನಾಡಿನಲ್ಲಿ ಭಾರಿ ಮಳೆಗೆ ಬಲಿಯಾದವರ ಸಂಖ್ಯೆ 16ಕ್ಕೆ ಏರಿಕೆ

ತಮಿಳುನಾಡು: 

      ಭಾರಿ ಮಳೆಯಿಂದಾಗಿ  ಚೆನ್ನೈನ  ನಗರದ ಬೀದಿಗಳು ಸಂಪೂರ್ಣ ಜಲಾವೃತಗೊಂಡಿದೆ. ಅಷ್ಟೆ ಅಲ್ಲದೆ ಕೊಯಮತ್ತೂರಿನಲ್ಲಿ ಮನೆಯ ಗೋಡೆಗಳು ಕುಸಿದು ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.   ನಿನ್ನೆ ಸಂಜೆಇಂದ ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿವೆ. ಹಲವು ಮನೆಗಳಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.

   ಜೊತೆ ಇಂದು ಕೊಯಮತ್ತೂರು ಜಿಲ್ಲೆಯ ಮೆಟ್ಟುಪಾಳಯಂ ಬಳಿ ನಾಡೂರಿನಲ್ಲಿ ಕೆಲವು ಮನೆಗಳ ಗೋಡೆಗಳು ಕುಸಿದು ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ .

 

   ಆದರಿಂದ ತಮಿಳುನಾಡು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿರುವಳ್ಳೂರು ತೂತುಕುಡಿ, ರಾಮನಾಥಪುರಂ, ಚೆಂಗಲ್ಪಟ್ಟು, ಕಡಲೂರು,ಕಾಂಚೀಪುರಂ, ಚೆನ್ನೈ ನಗರಗಳಲ್ಲಿ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಿಸಿದೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ