ಹೊಸ ಲುಕ್‌ ನಲ್ಲಿ ಮಿಂಚಿದ ಕನ್ನಡತಿ ಅನು ಅಕ್ಕ…..!

ತುಮಕೂರು : 

     ಸದಾ ಜೀನ್ಸ ಪ್ಯಾಂಟ್‌, ಶರ್ಟ್ ಧರಿಸಿ ತಲೆಗೆ ತುರುಬೋ ಅಥವಾ ಜುಟ್ಟೋ ಕಟ್ಟಿ ರಣ ಬಿಸಿಲಿಲೆನ್ನದೇ ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿಯುವ ಕಾರ್ಯದಲ್ಲೇ ಕಾಣಿಸಿಕೊಳ್ಳುವ ಅಕ್ಕ ಅನು ಇದೀಗ ಡಿಫರೆಂಟ್‌ ಲುಕ್‌ವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

    ಸೋಷಿಯಲ್​ ಮೀಡಿಯಾದಲ್ಲಿ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿರುವ ಕನ್ನಡತಿ ಅಕ್ಕ ಅನು ಯಾರಿಗೆ ಗೊತ್ತಿಲ್ಲ ಹೇಳಿ. ನೂರಕ್ಕೆ ತೊಂಬತೈದರಷ್ಟು ಜನ ಆಕೆಯ ಸಮಾಜಮುಖಿ ಕಾರ್ಯಗಳನ್ನು ಮೆಚ್ಚಿ ಹೊಗಳಿ ಗೌರವ ನೀಡುತ್ತಿದ್ದರೆ, ಇನ್ನೂ ಕೆಲವರು ಇವರನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡಿದ್ದಾರೆ. ಇನ್ನು ನೂರರಲ್ಲಿ ಐದು ಶೇಕಡಾ ಜನರಷ್ಟೇ ಈಕೆಯನ್ನು ಟೀಕಿಸುತ್ತಾರೆ, ಅಲ್ಲದೇ ಅಕ್ಕ ಅನು ಫಾಲೋವರ್ಸ್‌ಗಳಿಂದ ತಾವೇ ಟೀಕೆಗೆಗೊಳಗಾಗುತ್ತಾರೆ. ಅದೇನೇ ಇರಲಿ ಕನ್ನಡತಿ ಅಕ್ಕ ಅನು ಹಾಗೂ ಅವರ ತಂಡದ ಕಾರ್ಯ ಎಂತವರೂ ಮೆಚ್ಚುವಂತದ್ದು.

     ಕನ್ನಡತಿ ಅಕ್ಕ ಅನು ಎಂದರೆ ಕನ್ನಡಿಗರಿಗೆ ಗೌರವದ ಭಾವ. ಹೀಗಾಗಿ ಇವರ ಬಗ್ಗೆ ಯಾವುದೇ ವಿಚಾರಗಳಿದ್ದರೂ ತಿಳಿದುಕೊಳ್ಳುವ ಕುತೂಹಲ ಅನೇಕರಿಗಿದೆ. ಅದೇ ರೀತಿ ಇದೀಗ ಅಕ್ಕ ಅನು ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಫೋಟೋದಲ್ಲಿ ಅಕ್ಕ ಅನು ಹೊಸ​ ಹೇರ್ ಸ್ಟೈಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಹತ್ತಾರು ಅಕ್ಕ ಅನು ಫ್ಯಾನ್‌ ಪೇಜ್‌ಗಳಲ್ಲಿ ಒಂದು ಪೇಜ್‌ನಲ್ಲಿ ಈ ಫೋಟೋ ಶೇರ್‌ ಮಾಡಿದ್ದಾರೆ.

     ಈ ಫೋಟೋದಲ್ಲಿ ಅಕ್ಕ ಅನು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಸದ್ಯ ಸಖತ್‌ ವೈರಲ್ ಆಗಿದ್ದು, ಅಭಿಮಾನಿಗಳು ಫುಲ್ ಪಿಧಾ ಆಗಿದ್ದಾರೆ. ನೀವು ನಿಮ್ಮ ಸಮಾಜಸೇವೆ ಜೊತೆಗೆ ನಿಮಗಾಗಿಯೂ ಸಮಯ ಕೊಡಿ. ಹೀಗೆ ಅಂದವಾಗಿ ಕಾಣಿಸಿಕೊಳ್ಳುತ್ತಿರಿ ಎಂದು ಅಭಿಮಾನಿಗಳು ಕಮೆಂಟ್‌ ಮಾಡುತ್ತಿದ್ದಾರೆ. ಸದ್ಯ ಅಕ್ಕ ಅನು ಹೊಸ ಫೋಟೋ ವೈರಲ್‌ ಆಗುತ್ತಿದ್ದು, ಸಾವಿರಾರು ಲೈಕ್ಸ್‌ಗಳನ್ನು ಪಡೆದುಕೊಳ್ಳುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap