ಹೊಸದಿಲ್ಲಿ :
ಬಾಬರಿ ಮಸೀದಿಯನ್ನು ಬೀಳಿಸಲಾದ ನಂತರ ಸರಕಾರ ವಶಪಡಿಸಿಕೊಂಡಿದ್ದ 67 ಎಕರೆ ಖಾಲಿ ಭೂಮಿಯನ್ನು ಅದರ ಮೂಲ ಮಾಲೀಕರಾದ ರಾಮ ಜನ್ಮಭೂಮಿ ನ್ಯಾಸ್ ಗೆ ಮರಳಿ ನೀಡುವುದಕ್ಕೆ ಅನುಮತಿ ಕೋರಿ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ಮೆಟ್ಟಲೇರಿದೆ.
1992ರಲ್ಲಿ ಸರಕಾರ ವಶಪಡಿಸಿಕೊಂಡಿದ್ದ 67 ಎಕರೆ ಖಾಲಿ ಜಾಗದಲ್ಲಿ ಕೇವಲ 2.7 ಎಕರೆ ಮಾತ್ರವೇ ವಿವಾದಿತವಾಗಿದೆ. ಉಳಿದ ಜಾಗ ವಿವಾದಿತವಾಗಿಲ್ಲ. ಹಾಗಾಗಿ ಅದನ್ನು ಅದರ ಒಡೆತನ ಹೊಂದಿರುವ ರಾಮ ಜನ್ಮಭೂಮಿ ನ್ಯಾಸ್ ಗೆ ಮರಳಿಸಬೇಕಾಗಿದೆ ಎಂದು ಕೇಂದ್ರ ಸರಕಾರ ಕೋರ್ಟಿಗೆ ತಿಳಿಸಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಉಸ್ತುವಾರಿಯನ್ನು ನೋಡಿಕೊಳ್ಳುವ ಸಲುವಾಗಿ ರಾಮ ಜನ್ಮಭೂಮಿ ನ್ಯಾಸ್ ಎಂಬ ಟ್ರಸ್ಟ್ ಅಸ್ತಿತ್ವಕ್ಕೆ ಬಂದಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ