ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾಂಕ ಗಾಂಧಿ ನೇಮಕ

ರಾಬರ್ಟ್​ ವಾದ್ರಾ ಮೇಲೆ ಭ್ರಷ್ಟಾಚಾರ ಆರೋಪ ಕೇಳಿ ಬಂದ ನಂತರ ಸಾರ್ವಜನಿಕ ಜೀವನದಿಂದ ಪ್ರಿಯಾಂಕ ಗಾಂಧಿ ದೂರ ಉಳಿಯಲು ಇಚ್ಛಿಸಿದ್ದರು ಎಂಬ ಮಾತು ಕೇಳಿ ಬಂದಿತ್ತು. ಆ ಮಾತಿಗೆ ತಕ್ಕಂತೆ ರಾಷ್ಟ್ರ ರಾಜಕಾರಣದಲ್ಲಿ ಮುಂಚೂಣಿಗೆ ಬರುವ ಹೊತ್ತಿನಲ್ಲೇ ಪ್ರಿಯಾಂಕ ರಾಜಕೀಯದಿಂದ ದೂರ ಉಳಿದರು. ಆದರೀಗ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿರುವಾಗ ಸಕ್ರಿಯ ರಾಜಕಾರಣಕ್ಕೆ ಮತ್ತೆ ಕಾಲಿಟ್ಟಿದ್ದಾರೆ. ಪಕ್ಷ ಸಂಘಟನೆಯಲ್ಲಿ ಅಜ್ಜಿ ಇಂದಿರಾ ಗಾಂಧಿಯವರಂಥದ್ದೇ ವರ್ಚಸ್ಸನ್ನು ಪ್ರಿಯಾಂಕ ಹೊಂದಿದ್ದಾರೆ ಎಂಬ ಮಾತನ್ನು ಕಾಂಗ್ರೆಸ್​ ಹಿರಿಯ ನಾಯಕರೇ ಹೇಳುತ್ತಿದ್ದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap