ಕಾಂತಾರ-1 ರಿಲೀಸ್‌ ಡೇಟ್‌ ಅನೌನ್ಸ್‌ ….!

ಬೆಂಗಳೂರು: 

    ಪ್ಯಾನ್‌ ಇಂಡಿಯಾ ಮಾತ್ರವಲ್ಲದೇ ಇಡೀ ಪ್ರಪಂಚದಲ್ಲೇ ಭಾರೀ ಸದ್ದು ಮಾಡಿದ್ದ ಕಾಂತಾರ ಚಿತ್ರತಂಡದಿಂದ ಸಿನಿ ಪ್ರಿಯರಿಗೆ ಗುಡ್‌ನ್ಯೂಸ್‌ ಒಂದು ಸಿಕ್ಕಿದೆ. ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ ಹುಟ್ಟುಹಬ್ಬವಾದ ಇಂದೇ ಚಿತ್ರತಂಡ ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಕಾಂತಾರ ಚಾಪ್ಟರ್-‌1ಗೆ ಕಾತರದಿಂದ ಕಾಯುತ್ತಿರುವ ಫ್ಯಾನ್ಸ್‌ ದಿಲ್‌ ಖುಷ್‌ ಆಗಿದ್ದಾರೆ. ರಿಷಬ್‌ ಶೆಟ್ಟಿಹುಟ್ಟುಹಬ್ಬಕ್ಕೆ ಚಿತ್ರತಂಡ ಪೋಸ್ಟರ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕಾಂತಾರ-1ರ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದೆ.

  ಕಾಂತಾರ ಪ್ರೀಕ್ವೆಲ್ ಮೊದಲೇ ನಿರ್ಧರಿಸಿದಂತೆ​​ ಅಕ್ಟೋಬರ್ 2ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಶೆಟ್ಟಿ ಮತ್ತು ಚಿತ್ರದ ನಿರ್ಮಾಪಕರು ಈಗಾಗಲೇ ಇದನ್ನು ಸ್ಪಷ್ಟಪಡಿಸಿದ್ದಾರೆ. ಇದೀಗ ಇಂದು ರಿಲೀಸ್‌ ಆಗಿರುವ ಪೋಸ್ಟರ್‌ ಚಿತ್ರದ ರಿಲೀಸ್‌ ಡೇಟ್‌ ಅನ್ನು ಮತ್ತೆ ದೃಢಪಡಿಸಿದೆ.

    ಈ ಕಾರಣದಿಂದ ಸಿನಿಮಾ ರಿಲೀಸ್ ವಿಳಂಬ ಆಗಲಿದೆ ಎಂದು ಹೇಳಲಾಗುತ್ತಿತ್ತು. ಈ ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹಬ್ಬಿದ್ದವು. ಆದರೆ, ಇದನ್ನು ತಂಡ ಅಲ್ಲಗಳೆದಿದೆ. ಅಂದುಕೊಂಡ ದಿನಾಂಕದಂದೇ ಸಿನಿಮಾ ಬಿಡುಗಡೆ ಆಗಲಿದೆ ಎಂದು ತಂಡ ಮಾಹಿತಿ ನೀಡಿದೆ. 

   ಇನ್ನು ಕಾಂತಾರ ಚಿತ್ರತಂಡ ರಿಲೀಸ್‌ ಮಾಡಿರುವ ಪೋಸ್ಟರ್‌ನಲ್ಲಿ ಏನಿದೆ ಎಂಬುದನ್ನು ನೋಡುವುದಾದರೆ, ಬೆಂಕಿಯ ಜ್ವಾಲೆಯ ನಡುವೆ ಒಂದು ಕೈಯಲ್ಲಿ ಗುರಾಣಿ ಮತ್ತೊಂದು ಕೈಯಲ್ಲಿ ಕೊಡಲಿ ಹಿಡಿದ ರಿಷಬ್‌ ಆಕ್ರೋಶದಿಂದ ಮುನ್ನುಗ್ಗುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ದಂತಕಥೆಯ ಮುನ್ನುಡಿ. ಆ ನುಡಿಗೊಂದು ಪರಿಚಯ. ಮನದಾಳದ ಕಥೆಗೆ ಮತ್ತೊಮ್ಮೆ ಸ್ವಾಗತ ಎಂದು ಪೋಸ್ಟರ್​ನಲ್ಲಿ ಬರೆಯಲಾಗಿದೆ. ಪ್ಯಾನ್‌ ಇಂಡಿಯಾ ಚಿತ್ರವಾದ ಇದು ಒಟ್ಟು ಏಳು ಭಾಷೆಗಳಲ್ಲಿ ರಿಲೀಸ್‌ ಆಗಲಿದೆ.

Recent Articles

spot_img

Related Stories

Share via
Copy link