ಚುನಾವಣಾ ಬಾಂಡ್ ಹಗರಣ : ಇದು ದೇಶದ ಅತಿ ದೊಡ್ಡ ಹಗರಣ : ಕಪಿಲ್‌ ಸಿಬಲ್‌

ವದೆಹಲಿ: 

    ಚುನಾವಣಾ ಬಾಂಡ್​ ವಿಚಾರದಲ್ಲಿ ಫೆಬ್ರವರಿ 15ರಂದು ಸುಪ್ರೀಕೋರ್ಟ್​ ಮಹತ್ವದ ತೀರ್ಪು ಪ್ರಕಟಿಸಿರುವುದು ಬಹುತೇಕರಿಗೆ ತಿಳಿದಿದೆ. ರಾಜಕೀಯ ಪಕ್ಷಗಳು ಪಡೆಯುವ ಚುನಾವಣಾ ಬಾಂಡ್​ ಅನ್ನು ಅಸಂವಿಧಾನಿಕ ಎಂದಿರುವ ಉನ್ನತ ನ್ಯಾಯಾಲಯ ಅದನ್ನು ರದ್ದು ಮಾಡಿ, ಬಾಂಡ್​ ವಿವರಗಳನ್ನು ವೆಬ್​ಸೈಟ್​ನಲ್ಲಿ ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿತು.

    ಅದರಂತೆಯೇ ಮಾರ್ಚ್​ ಚುನಾವಣಾ ಆಯೋಗ ತನ್ನ ವೆಬ್​ಸೈಟ್​ನಲ್ಲಿ ಚುನಾವಣಾ ಬಾಂಡ್​ ವಿವರಗಳನ್ನು ಅಪ್​ಲೋಡ್​ ಮಾಡಿತು. ಸದ್ಯ ಈ ವಿಚಾರ ಕುರಿತಂತೆ ಮಾತನಾಡಿರುವ ಹಿರಿಯ ವಕೀಲ ಕಪಿಲ್ ಸಿಬಲ್ ದೇಶದ ಇತಿಹಾಸದಲ್ಲಿ ನಡೆದ ದೊಡ್ಡ ಹಗರಣವಿದು ಎಂದು ಹೇಳಿದ್ದಾರೆ. 

    ಚುನಾವಣಾ ಬಾಂಡ್‌ಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಬೆಳವಣಿಗೆ ಬಗ್ಗೆ ಮಾತನಾಡಿದ ಕಪಿಲ್, ಮಾರ್ಚ್ 21ರೊಳಗೆ ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಬಹಿರಂಗಪಡಿಸುವಂತೆ ಎಸ್‌ಬಿಐಗೆ ಸುಪ್ರೀಂ ಕೋರ್ಟ್‌ನ ಆದೇಶದ ಕುರಿತು ಹಲವು ವಿಷಯಗಳನ್ನು ಬಹಿರಂಗಪಡಿಸಿದರು.

    ‘ದುರದೃಷ್ಟವಶಾತ್, ಇದು ಬಹುಶಃ ಈ ದೇಶದ ಇತಿಹಾಸದಲ್ಲಿ ನಡೆದ ಅತಿದೊಡ್ಡ ಹಗರಣ. ಈ ಯೋಜನೆಯು ಪಾರದರ್ಶಕವಾಗಿಲ್ಲ ಎಂಬುದೇ ಸತ್ಯ, ಹಾಗಾಗಿ ಉದ್ಯಮಿ ಅಥವಾ ಕೈಗಾರಿಕೋದ್ಯಮಿ, ಯಾರಾದರೂ ರಾಜಕೀಯ ಪಕ್ಷಕ್ಕೆ ಹಣ ನೀಡಬೇಕೆಂದಿದ್ದರೆ ಅದನ್ನು ಚೆಕ್ ಮೂಲಕವೇ ಮಾಡಬೇಕಿತ್ತು. ಅದಕ್ಕೂ ಅವಕಾಶ ನೀಡಲಾಗಿದೆ. ಆದರೆ ಚೆಕ್ ಮೂಲಕ ಮಾಡಲಿಲ್ಲ ಯಾಕೆ?’ ಎಂದರು.

   ‘ಅವರೇ ಯಾಕೆ ಹೋಗಿ ಈ ಬಾಂಡ್ ಖರೀದಿಸಬೇಕಾಯಿತು? ಸ್ವಾಭಾವಿಕವಾಗಿ, ಈ ಯೋಜನೆಯ ಉದ್ದೇಶವು ಅಧಿಕಾರದಲ್ಲಿರುವ ರಾಜಕೀಯ ಪಕ್ಷವನ್ನು ಶ್ರೀಮಂತಗೊಳಿಸುವುದನ್ನು ಖಚಿತಪಡಿಸಿ ಕೊಳ್ಳುವುದಾಗಿತ್ತು. ಅದಕ್ಕಾಗಿಯೇ ಬಿಜೆಪಿಗೆ ಈ ಬಾಂಡ್​ನಿಂದ, ಈ ಸ್ಕೀಮ್​ ಮುಖಾಂತರ 6000 ಕೋಟಿ ರೂ. ದೊರೆತಿದೆ’ ಎಂದರು,

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ 

Recent Articles

spot_img

Related Stories

Share via
Copy link
Powered by Social Snap